ಜಾಲ್ಸೂರು ಪ್ರಥಮ ಹಂತದ ಗ್ರಾಮ ಸಭೆ

0

ಜಾಲ್ಸೂರು ಗ್ರಾ.ಪಂ.ನ 2024-2025ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ಜು.23ರಂದು ನಡೆಯಿತು.


ಸಮಾಜ ಕಲ್ಯಾಣ ಇಲಾಖೆಯ ಉಮಾದೇವಿಯವರು ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು.

ಭಾರೀ ಮಳೆಯಿಂದಾಗಿ ಗ್ರಾಮದ ಸೋಣಂಗೇರಿ ಅಂಗನವಾಡಿ ಕಟ್ಟಡದ ಸುತ್ತ ನೀರು ತುಂಬಿಕೊಂಡು ಅಪಾಯದ ಸ್ಥಿತಿಯಲ್ಲಿದ್ದು ಗ್ರಾಮಸ್ಥರು ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಮಧ್ಯೆ ಚರ್ಚೆ ನಡೆಯಿತು. ಜೊತೆಗೆ ಬೊಳುಬೈಲು , ಕುಂಬರ್ಚೋಡು , ಪೈಚಾರು , ಸೋಣಂಗೇರಿ ಭಾಗದಲ್ಲಿ ಮುಖ್ಯರಸ್ತೆ ಬದಿಯಲ್ಲಿ ಅಪಾಯಕಾರಿ ಮರಗಳಿದ್ದು ಇದನ್ನು ತಿರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಜೊತೆಗೆ ರಸ್ತೆ , ವಿದ್ಯುತ್ , ಚರಂಡಿ ದುರಸ್ತಿ , ಬೀದಿ ದೀಪ ಅಳವಡಿಕೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕುರಿತು ವಿಸ್ಕೃತ ಚರ್ಚೆ ನಡೆಯಿತು. ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಶ್ರೀಮತಿ ತಿರುಮಲೇಶ್ವರಿ ಅರ್ಬಡ್ಕ , ಸದಸ್ಯರುಗಳಾದ ಸತೀಶ್ ಕೆಮನಬಳ್ಳಿ , ಸಂದೀಪ್ ಕದಿಕಡ್ಕ, ಕೆ.ಎಂ. ಬಾಬು ಕದಿಕಡ್ಕ, ಶ್ರೀಮತಿ ಲೀಲಾವತಿ ವಿನೋಬಾನಗರ , ಅಬ್ದುಲ್ ಮಜೀದ್ ನಡುವಡ್ಕ, ಶ್ರೀಮತಿ ಸಂಧ್ಯಾ ವಾಗ್ಲೆ ಅಡ್ಕಾರು , ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು, ಶ್ರೀಮತಿ ಗೀತಾ ಗೋಪಿನಾಥ ಬೊಳುಬೈಲು, ಶ್ರೀಮತಿ ಗೀತಾ ಚಂದ್ರಹಾಸ ಅರ್ಬಡ್ಕ, ಮುಜೀಬ್ ಪೈಚಾರು, ಶಿವಪ್ರಸಾದ್ ನೀರಬಸಿರು, ಈಶ್ವರ ನಾಯ್ಕ ಸೋಣಂಗೇರಿ, ಶ್ರೀಮತಿ ಅಂಬಿಕಾ ಕುಕ್ಕಂದೂರು, ಶ್ರೀಮತಿ ದೀಪಾ ಅಜಕಳಮೂಲೆ ಉಪಸ್ಥಿತರಿದ್ದರು. ಗ್ರಾ.ಪಂ.ಪ್ರಭಾರ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ ಅವರು ಸ್ವಾಗತಿಸಿ, ಬಿಲ್ ಕಲೆಕ್ಟರ್ ಚಿದಾನಂದ ವರದಿ ಮಂಡಿಸಿದರು.