ದೇವರಹಳ್ಳಿ ದೊಡ್ಡಮನೆ ಲಿಂಗಪ್ಪ ಗೌಡ (ಜಯರಾಮ ಮಾಣಿಬೈಲು) ನಿಧನ

0

ಏನೆಕಲ್ಲು ಗ್ರಾಮದ ದೇವರಹಳ್ಳಿ ದೊಡ್ಡ ಮನೆ ಲಿಂಗಪ್ಪ ಗೌಡ (ಜಯರಾಮ ಮಾಣಿಬೈಲು) ಇಂದು (ಜು.24) ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 64 ವರ್ಷ ವಯಸ್ಸಾಗಿತ್ತು.

ಇವರು ದೇವರ ಹಳ್ಳಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಮಾಣಿಬೈಲು ಕುಟುಂಬದ ಊರಿನ ದೈವದ ಪೂಜಾರಿಯಾಗಿ ಸೇವೆ ಮಾಡುತಿದ್ದವರು. ಮೃತರು ಪತ್ನಿ, ಓರ್ವ ಪುತ್ರ, ಸಹೋದರ ಸಹೋದರಿಯರು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.