ಸುಳ್ಯ ಠಾಣೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ಪೊಲೀಸರ ವರ್ಗಾವಣೆ

0

ಐದು ವರ್ಷಗಳಿಂದ ಒಂದೇ ಠಾಣೆಯಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳು, ಹೆಡ್ ಕಾನ್ಸ್ಟೇಬಲ್ ಗಳು,ಎ ಎಸ್ ಐ ಗಳನ್ನು ವರ್ಗಾವಣೆ ಮಾಡುವಂತೆ ಕರ್ನಾಟಕ ಸರ್ಕಾರ ಆದೇಶ ನೀಡಿದ ಹಿನ್ನಲೆಯಲ್ಲಿ ಸುಳ್ಯ ಪೊಲೀಸ್ ವೃತ ನಿರೀಕ್ಷಕ ವ್ಯಾಪ್ತಿಯ ಸುಮಾರು ೪೦ಕ್ಕೂ ಹೆಚ್ಚು ಪೊಲೀಸರು ಬೇರೆ, ಬೇರೆ ಠಾಣೆಗಳಿಗೆ ವರ್ಗಾವಣೆ ಗೊಂಡಿರುತ್ತಾರೆ.

ಸುಳ್ಯ ಠಾಣೆಯ ಎ ಎಸ್ ಐ ಗಂಗಾಧರ ರವರು ಪುತ್ತೂರು ನಗರ ಠಾಣೆಗೆ,ಹೆಡ್ ಕಾನ್ಸ್ಟೇಬಲ್ ಗಳಾದ ಸತೀಶ್ ಸಿ ಬೆಳ್ಳಾರೆ ಪೊಲೀಸ್ ಠಾಣೆಗೆ,ಸತೀಶ್ ಸುಬ್ರಹ್ಮಣ್ಯ ಠಾಣೆಗೆ, ಉದಯ ಗೌಡ ಬೆಳ್ಳಾರೆ ಠಾಣೆಗೆ, ಶಿವಾನಂದ ಕೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಗೆ,ರಾಮ ನಾಯ್ಕ ಸುಳ್ಯ ಪೊಲೀಸ್ ವೃತ ಕಚೇರಿಗೆ, ಶ್ರೀಮತಿ ಶಾಲಿನಿ ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿರುತ್ತಾರೆ.

ಪೊಲೀಸ್ ಸಿಬ್ಬಂದಿಗಳಾದ ಸುರೇಶ್ ಬೆಳ್ಳಾರೆ ಪೊಲೀಸ್ ಠಾಣೆ, ಮಹಮ್ಮದ್ ಮೌಲಾನ ಪುತ್ತೂರು ಗ್ರಾಮಾಂತರ ಠಾಣೆ, ಚಂದ್ರಶೇಖರ ಸಜ್ಜನ್, ಸುನಿಲ್ ತಿವಾರಿ ರವರು ಪುತ್ತೂರು ಸಂಚಾರ ಪೊಲೀಸ್ ಠಾಣೆ,ನಾಗರಾಜ್ ಎಚ್ ವಿಟ್ಲ ಪೊಲೀಸ್ ಠಾಣೆ, ಮನು ಗೌಡ ಬೆಳ್ಳಾರೆ ಠಾಣೆ, ಮನು ನಾಯ್ಕ್ ಬೆಳ್ತಂಗಡಿ ಠಾಣೆ, ಅನಿಲ್,ಮಧು ಜಿ ಡಿ, ಗಿರೀಶ್ ಇವರುಗಳು ಬೆಳ್ಳಾರೆ ಠಾಣೆಗೆ ವರ್ಗಾವಣೆಗೊಂಡಿರುತ್ತಾರೆ.


ವರ್ಗಾವಣೆಗೊಂಡಿರುವ ಸುಳ್ಯ ಠಾಣೆಯ ಎ ಎಸ್ ಐ ಅವರ ಸ್ಥಾನಕ್ಕೆ ಕಡಬ ಠಾಣೆಯಿಂದ ಸುರೇಶ್ ಸಿಟಿ , ಹೆಡ್ ಕಾನ್‌ಸ್ಟೇಬಲ್ ಸ್ಥಾನಕ್ಕೆ ಬೆಳ್ಳಾರೆ ಠಾಣೆಯಿಂದ ಕೃಷ್ಣಪ್ಪ .ಎ, ಸುಳ್ಯ ವೃತ್ತ ನಿರೀಕ್ಷಕ ಕಛೇರಿಯಿಂದ ರಾಮಚಂದ್ರ ಕೆ, ಮತ್ತು ದೇವರಾಜ್ ಕೆ, ಬೆಳ್ಳಾರೆ ಠಾಣೆಯಿಂದ ನವೀನ್ ಕೆ, ರೋಶನ್ ಕೆ, ಎಸ್ ಡಿ ಪಿ ಒ ಪುತ್ತೂರಿನಿಂದ ವಿಶ್ವನಾಥ ನಾಯ್ಕ, ಲಕ್ಷ್ಮೀನಾರಾಯಣ, ಪೋಲೀಸ್ ಕಾನ್ ಸ್ಟೇಬಲ್‌ಗಳ ಸ್ಥಾನಕ್ಕೆ ಬೆಳ್ಳಾರೆ ಠಾಣೆಯಿಂದ ಸತೀಶ್ ನಾಯ್ಕ. ಎಸ್, ಸಂತೋಷ್ ಗವಿಯಾವರ , ಹಾಲೇಶ್ ಅಜ್ಜಪ್ಪ ಗೌಡ್ರ, ಮಂಜುನಾಥ ಹೆಚ್ .ಜೆ, ಮಹದೇವ ಪ್ರಸಾದ್ ಎಸ್, ಲಕ್ಷ್ಮಣ್ ದೊಡವಾಡ್, ಬಸವರಾಜ್ ಎಸ್ ಮುದಾಣಿ, ಬಂಟ್ವಾಳ ಗ್ರಾಮೀಣ ಠಾಣೆಯಿಂದ ಸೋಮಶೇಖರ ಟಿ ಜೆ, ವಿಟ್ಲ ಠಾಣೆಯಿಂದ ಹೇಮಾ ಕೆ.ಎಲ್, ಇವರುಗಳು ಕರ್ತವ್ಯಕ್ಕೆ ಆಗಮಿಸಲಿದ್ದಾರೆ .