ಸುಳ್ಯದ ನಾಡಹಬ್ಬ ಶ್ರೀ ಶಾರದಾಂಬ ದಸರಾ – 2024

0

ಸುಳ್ಯದ ನಾಡಹಬ್ಬ ಶ್ರೀ ಶಾರದಾಂಬ ದಸರಾ -2024ರ ಅಂಗವಾಗಿ ಕೆಸರುಗದ್ದೆ ದಸರಾ ಕ್ರೀಡೋತ್ಸವವು ಜು.28ರಂದು ಸುಳ್ಯದ ಪನ್ನೆಬೀಡು ಶ್ರೀ ಭಗವತಿ ಕ್ಷೇತ್ರದ ಮುಂಭಾಗದ ಗದ್ದೆಯಲ್ಲಿ ಜರುಗಲಿದ್ದು, ಇದರ ಪೂರ್ವತಯಾರಿ ಕುರಿತು ಶ್ರೀ ಶಾರದಾಂಬ ಸಮೂಹ ಸಮಿತಿಗಳ ಜಂಟಿ ಸಭೆಯು ಸುಳ್ಯದ ತಾ.ಪಂ. ಸಭಾಂಗಣದಲ್ಲಿ ಜು.24ರಂದು ಜರುಗಿತು.

ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.


ಜು.28ರಂದು ನಡೆಯಲಿರುವ ಕೆಸರುಗದ್ದೆ ದಸರಾ ಕ್ರೀಡೋತ್ಸವದ ಕುರಿತು ಕ್ರೀಡೋತ್ಸವ ಸಮಿತಿ ಸಂಚಾಲಕ ದೊಡ್ಡಣ್ಣ ಬರಮೇಲು ಅವರು ಮಾಹಿತಿ ನೀಡಿದರು.
53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಅಧ್ಯಕ್ಷ ಡಾ. ಲೀಲಾಧರ್ ಡಿ.ವಿ., ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಖಜಾಂಜಿ ಅಶೋಕ ಪ್ರಭು, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್ , ಉತ್ಸವ ಸಮಿತಿ ಗೌರವ ಸಲಹೆಗಾರ ಎಂ. ವೆಂಕಪ್ಪ ಗೌಡ ಅವರು ಶ್ರೀ ಶಾರದಾಂಬ ದಸರಾ ಕಾರ್ಯಕ್ರಮದ ಕಾರ್ಯಕ್ರಮಗಳ ಕುರಿತು ಮಾತನಾಡಿದರು.

ಮಕ್ಕಳ ದಸರಾ ಉತ್ಸವದ ಕುರಿತು ರಂಗಮಯೂರಿ ಕಲಾಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಅವರು ಮಾಹಿತಿ ನೀಡಿದರು. ಮಹಿಳಾ ದಸರಾದ ಕುರಿತು ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ ಅವರು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಶ್ರೀ ಶಾರದಾಂಬ ಉತ್ಸವ ಸಮಿತಿ ಕೋಶಾಧಿಕಾರಿ ಗಣೇಶ್ ಆಳ್ವ, ಗೌರವ ಸಲಹೆಗಾರರುಗಳಾದ ಎನ್.ಎ. ರಾಮಚಂದ್ರ, ಎನ್. ಜಯಪ್ರಕಾಶ್ ರೈ, ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀಮತಿ ಯಶೋದಾ ರಾಮಚಂದ್ರ, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಂ.ಕೆ. ಸತೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾರದಾಂಬ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದಸರಾ ಉತ್ಸವ ಸಮಿತಿ ಖಜಾಂಜಿ ಸುನಿಲ್ ಕುಮಾರ್ ಕೇರ್ಪಳ ವಂದಿಸಿದರು.