ಸುಬ್ರಹ್ಮಣ್ಯದಲ್ಲಿ ತಮಿಳುನಾಡು ಮೂಲದ ಅನಾಥ ಯುವಕ

0

ಅಮ್ಮನ ಮಡಿಲು ಸೇರಿಸಿದ ಪತ್ರಕರ್ತ ಶಿವ ಭಟ್ ಮತ್ತಿತರರು

ಸಮಾಜದಲ್ಲಿ ಪತ್ರಕರ್ತರು ಸುದ್ದಿಗಳಿಗೆ ಮಾತ್ರ ಸೀಮಿತವಾಗಿರದೆ ಸಾಮಾಜಿಕವಾಗಿಯೂ ತೊಡಗಿಕೊಂಡಿರುತ್ತಾರೆ.
ಎಂಬುದನ್ನು ಸುಬ್ರಹ್ಮಣ್ಯದ ವರದಿಗಾರ ಶಿವ ಭಟ್ ಕಾಂಚಾನ ಮಾಡಿ ತೋರಿಸಿದ್ದಾರೆ.

ಹಲವು ತಿಂಗಳುಗಳಿಂದ ಸುಬ್ರಹ್ಮಣ್ಯ ದ ಪುಟ್ ಪಾತ್ ನಲ್ಲೇ ಜೀವನ ಕಳೆಯುತ್ತಿದ್ದ ಯುವಕನನ್ನು ಭಾಷಾ ಸಂಹವನ ಕೊರತೆಯ ನಡುವೆಯೂ ಮನೆಯವರ ಜೊತೆ ಸಂಪರ್ಕಿಸುವಲ್ಲಿ ಸುಬ್ರಹ್ಮಣ್ಯದ ಶಿವ ಭಟ್ ಯಶಸ್ವಿಯಾಗಿದ್ದಾರೆ.


ವೃತ್ತಿಯಲ್ಲಿ ಅರ್ಚಕರಾಗಿರುವ ಪ್ರವೃತ್ತಿಯಲ್ಲಿ ಹವ್ಯಾಸಿ ಪತ್ರಕರ್ತರಾಗಿರುವ ಶಿವ ಭಟ್ ಅಪರಿಚಿತ ವ್ಯಕ್ತಿಯನ್ನು ಮನೆಯವರ ಜೊತೆ ಸಂಪರ್ಕ ಸಾಧಿಸಲು ಮುಂದಾಗಿದವರು.
ಸುಬ್ರಹ್ಮಣ್ಯದ ರಸ್ತೆಬದಿಯಲ್ಲಿ ಮಳೆಯಲ್ಲೇ ನೆನೆಯುತ್ತಾ ಮಲಗಿದ್ದ ಯುವಕನನ್ನು ವಿಚಾರಿಸಿದ ವೇಳೆ ಆತ ತಮಿಳು ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿ ತಾನು ಒಂದು ತಿಂಗಳಿನಿಂದ ಇಲ್ಲಿರುವುದಾಗಿ ತಿಳಿಸಿದ್ದರು . ಕೂಡಲೇ ಗ್ರಾ.ಪಂ ಪಿಡಿಒ ಮಹೇಶ್ ಅವರಿಗೆ ಮಾಹಿತಿ ನೀಡಿದಾಗ ಕೂಡಲೇ ರಕ್ಷಣೆಗಾಗಿ ಸಾಮಾಜಿಕ ಮುಂದಾಳು ರವಿ ಕಕ್ಕೆ ಪದವು ಮತ್ತು ಗ್ರಾ.ಪಂ ಸದಸ್ಯ ಹರೀಶ್ ಇಂಜಾಡಿ ಸಹಾಯ ಪಡೆದು. ಬಳಿಕ ಜನ ರಹಿತ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆತನನ್ನು ಸ್ನಾನ ಮಾಡಿಸಿ ಹೊಸ ಬಟ್ಟೆ ನೀಡಿ ತಿಂಡಿ ನೀಡಿದ್ದರು.
ಆತನನ್ನು ವಿಚಾರಿಸಿದಾಗ ನಮ್ಮ ಜೊತೆ ಹೇಳಿದ ಹೆಸರು ಹರೀಶ್ ಕುಮಾರ್(ನಿಜವಾದ ಸತೀಶ್ )ಕೊಯಮತ್ತೂರು ಎಂದು ಹೇಳಿದ್ದು ಈ ವೇಳೆ ಪತ್ರಕರ್ತ ಶಿವಭಟ್ ಅವರು ಅಲ್ಲಿನ ಪೊಲೀಸರ ಸಹಾಯವಾಣಿಯನ್ನು ಸಂಪರ್ಕಿಸಿದ್ದರು. ಜೊತೆಗೆ ಅಲ್ಲಿನ (ಈರನೆಂಜಂ) ಮಹೇಂದ್ರನ್ ಎಂಬವರು ನಡೆಸುವ (NGO)ಸಂಸ್ಥೆಯನ್ನು ಸಂಪರ್ಕಿಸಿದ್ದರು.


ಅವರು ಹೇಳಿದ ವಿಳಾಸವನ್ನು ತಾಳೆ ಮಾಡಿದಾಗ ಕೊಯಂಬತ್ತೂರು ಗಾಂಧಿನಗರ ಆರ್. ಎಸ್. ಪುರಂ ಎಂಬುದು ಸ್ಪಷ್ಟವಾಯಿತು. ಸಂಸ್ಥೆಯ ಮೂಲಕ ಕುಟುಂಬಸ್ಥರು ಪತ್ರಕರ್ತರನ್ನು ಸಂಪರ್ಕಿಸಿ ಯುವಕನ ತಾಯಿ ಸರಸ್ವತಿ ಅಳುತ್ತಲೇ ಮಾತನಾಡಿದ್ದಾರೆ. ಈ ವೇಳೆ ಬೆಂಗಳೂರು ಜನಸ್ನೇಹಿ ಸೇವಾಶ್ರಮಕ್ಕೆ ಕಳುಹಿಸಿರುವ ಬಗ್ಗೆ ಸ್ಪಷ್ಟ ಪಡಿಸಿ ಅಲ್ಲಿಂದಲೇ ಕರೆದುಕೊಂಡು ಹೋಗುವಂತೆ ತಿಳಿಸಲಾಯಿತು.
ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಅಧಿಕಾರಿ ಜುಬಿನ್ ಮಹಾಪಾತ್ರ ಅವರ ಸಹಕಾರದಿಂದ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಯಿತು.