ಪಂಜ: ಕಾಲೇಜುನಲ್ಲಿ ವನಮಹೋತ್ಸವ ಮತ್ತು ಹಣ್ಣಿನ ಗಿಡಗಳ ವಿತರಣೆ

0

ಲಯನ್ಸ್ ಕ್ಲಬ್ ಪಂಜ ಮತ್ತು ಅರಣ್ಯ ಇಲಾಖೆ ಪಂಜ ಇದರ ಆಶ್ರಯದಲ್ಲಿ ವನಮಹೋತ್ಸವ ಮತ್ತು ಹೆಣ್ಣಿನ ಗಿಡಗಳ ವಿತರಣೆ ಕಾರ್ಯಕ್ರಮ ಜು .24 ರಂದು ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ನಲ್ಲಿ ನಡೆಯಿತು.

ಪಂಜ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ರೈ ಕೆ ಉದ್ಘಾಟಿಸಿದರು.

ಪಂಜ ಲಯನ್ಸ್ ಕ್ಲಬ್ ಪ್ರಥಮ ಉಪಾಧ್ಯಕ್ಷ ನಾಗೇಶ್ ಕಿನ್ನಿಕುಮೇರಿ ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೀವನ್ ಮಲ್ಕಜೆ, ಮುಖ್ಯ ಶಿಕ್ಷಕ ಪುರಂದರ ಪನ್ಯಾಡಿ, ಕಾಲೇಜು ಉಪನ್ಯಾಸಕ ಚಿದಾನಂದ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುರೇಶ್ ಕುಮಾರ್ ನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕರುಣಾಕರ ಎಣ್ಣೆಮಜಲು ವೇದಿಕೆಗೆ ಆಹ್ವಾನಿಸಿದರು. ನಾಗೇಶ್ ಕಿನ್ನಿಕುಮೇರಿ ಪ್ರಾಸ್ತಾವಿಕಗೈದು ಸ್ವಾಗತಿಸಿದರು. ಪುರಂದರ ಪನ್ಯಾಡಿ ವಂದಿಸಿದರು.