ಅರಂತೋಡು ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಮಾದಕ ವ್ಯಸನದ ವಿರುದ್ಧ ಜನಜಜಾಗೃತಿ ಅಭಿಯಾನ

0

ಮಾದಕ ವ್ಯಸನದ ವಿರುದ್ಧ ಸಮರ ಅನಿವಾರ್ಯ : ಇಸ್ಮಾಯಿಲ್ ಫೈಝಿ ಗಟ್ಟಮನೆ

ಮಾದಕ ಎಂಬ ಮಹಾಮಾರಿ ಇದೀಗ ನಮ್ಮ ಸುತ್ತಮುತ್ತಲು ವ್ಯಾಪಿಸಿದೆ. ನಮ್ಮ ವಿದ್ಯಾರ್ಥಿಗಳನ್ನು ಮತ್ತು ಯುವಕರನ್ನು ಬಲಿಪಡೆದುಕೊಳ್ಳುತ್ತಿರುವ ಈ ವ್ಯಸನದಿಂದ ಸಮಾಜ ಹಾಳಾಗುತ್ತಿದೆ. ಆದುದರಿಂದ ಮಾದಕ ವ್ಯಸನದ ವಿರುದ್ಧ ಸಮರ ಅನಿವಾರ್ಯವಾಗಿದೆ ಎಂದು ಅರಂತೋಡು ಜುಮಾಮಸೀದಿಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ಹೇಳಿದರು. ಅವರು ಜು. 26 ರಂದು ಶುಕ್ರವಾರದ ಜುಮಾ ನಮಾಝ್ ಬಳಿಕ ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ ನಡೆದ ಮಾದಕ ವ್ಯಸನದ ವಿರುದ್ಧ ಜನ ಜಾಗೃತಿ ಅಭಿಯಾನದ – 2024 ರ ಪೋಸ್ಟರ್ ನ್ನು ಬಿಡುಗಡೆ ಮಾಡಿ ಮಾತನಾಡಿದರು. ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಕಾರ್ಯದರ್ಶಿ ಕೆ.ಎಂ ಮೂಸಾನ್, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಸಹಾಯಕ ಅಧ್ಯಾಪಕ ಅಶ್ರಫ್ ಆಲಿ ಮುಸ್ಲಿಯಾರ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್ ಎಸ್.ಇ, ತಾಲೂಕು ಎಸ್.ಕೆ ಎಸ್.ಎಸ್.ಎಫ್ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್, ಹಾಜಿ ಅಬ್ದುಲ್ ಖಾದರ್ ಪಠೇಲ್, ಕೆ.ಎಂ ಮೊಯಿದು ಕುಕ್ಕುಂಬಳ, ಎ.ಉಮ್ಮರ್, ಹಕೀಮ್ ಕೊಡಂಕೇರಿ, ನವಾಝ್, ಜವಾದ್ ಪಾರೆಕ್ಕಲ್, ಮುಝಮ್ಮಿಲ್ ಕುಕ್ಕುಂಬಳ, ಬಾತಿಷ ಕುಕ್ಕುಂಬಳ, ಸರ್ಪುದ್ಧೀನ್ ಕೆ.ಎಯು, ಮುನೀರ್ ಸೆಂಟ್ಯಾರ್, ಅಬ್ದುಲ್ ರಹಿಮಾನ್ ಎ.ಎ, ಟಿ.ಕೆ ಮಹಮ್ಮದ್, ಹಮೀದ್, ಮೊಹಮ್ಮದ್ ಅರ್ಷಾದ್ ಮೊದಲಾದವರು ಉಪಸ್ಥಿತರಿದ್ದರು.