ಜಾಲ್ಸೂರು : ಮಾಣಿ- ಮೈಸೂರು ಹೆದ್ದಾರಿ ಬಳಿಯಲ್ಲಿ ಅಪಾಯಕಾರಿ ಮರದ ಧಿಮ್ಮಿ ಗಳು

0

ವಾಹನ ಸವಾರರಿಗೆ ಅನಾಹುತ ಉಂಟಾಗುವ ಆತಂಕ

ಜಾಲ್ಸೂರು ಸಮೀಪ ಮಾಣಿ ಮೈಸೂರು ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿ ತುಂಡರಿಸಿ ಬಿಟ್ಟಿರುವ ಮರದ ದಿಮ್ಮಿಗಳು ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ.

ಇತ್ತೀಚೆಗೆ ಸಂಬಂಧ ಪಟ್ಟ ಇಲಾಖೆಯಿಂದ ಗಾಳಿ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತೆರವುಗೊಳಿಸಿರುವ ಮತ್ತು ಗಾಳಿಯಿಂದ ಬಿದ್ದಿರುವ ಮರಗಳನ್ನು ಕತ್ತರಿಸಿ ಅದರ ದಿಮ್ಮಿಗಳನ್ನು ರಸ್ತೆ ಬದಿಯಲ್ಲಿಯೇ ಇರಿಸಲಾಗಿದೆ.

ಈ ಪ್ರದೇಶದ ರಸ್ತೆಯು ತಿರುವಿನಿಂದ ಕೂಡಿದ್ದು ರಾತ್ರಿ ಸಂದರ್ಭದಲ್ಲಿ ಸಂಚರಿಸುವ ವಾಹನ ಸವಾರರಿಗೆ ಅಪಾಯವನ್ನು ತಂದೊಡ್ದುವ ಸಂಭವ ಗೋಚರಿಸುತ್ತಿದೆ.

ವೇಗವಾಗಿ ಬರುವ ವಾಹನಗಳು, ಬೇರೆ ವಾಹನಗಳಿಗೆ ಸೈಡ್ ಕೊಡುವ ಸಂದರ್ಭದಲ್ಲಿ ಮಳೆ ಮತ್ತು ಗಾಳಿಯ ಕಾರಣದಿಂದ ಎದುರಿನಿಂದ ಬರುವ ವಾಹನದ ಬೆಳಕಿಗೆ ರಸ್ತೆ ಬದಿಯಲ್ಲಿರುವ ದಿಮ್ಮಿಗಳು ಏಕಾಏಕಿ ಕಾಣದೆ ಇರುವ ಸಂಭವ ವಿದ್ದು ಅಪಘಾತಗಳು ಉಂಟಾಗಲು ಕಾರಣವಾಗಬಹುದು.

ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿ ಮುಂದೆ ಉಂಟಾಗಬಹುದಾದ ಅನಾಹುತವನ್ನು ತಪ್ಪಿಸಬೇಕಾಗಿದೆ.