








ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಹಕಾರ ರತ್ನ ರಾಜ್ಯ ಪ್ರಶಸ್ತಿ ಪಡೆದ ಪಿ.ಸಿ.ಜಯರಾಮ ಮತ್ತು ಕ್ಯಾಂಪ್ಕೊ ಲಿ.ಮಂಗಳೂರು ಇದರ ನೂತನ ನಿರ್ದೇಶಕರಾಗಿ ಆಯ್ಕೆಯಾದ ಎ.ವಿ.ತೀರ್ಥರಾಮರಿಗೆ ಗೌರವಾರ್ಪಣೆ ಹಾಗೂ ಸಂಸ್ಥೆಯ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಇಂದು(ಡಿ.11) ನಡೆಯಿತು.
ಸೊಸೈಟಿಯ ಅಧ್ಯಕ್ಷರಾದ ಕೆ.ಸಿ.ಸದಾನಂದ, ಉಪಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ನಿರ್ದೇಶಕರುಗಳಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಚಂದ್ರಾ ಕೋಲ್ಟಾರ್, ಪಿ. ಎಸ್. ಗಂಗಾಧರ, ಮೋಹನ್‌ರಾಂ ಸುಳ್ಳಿ, ಲಕ್ಷ್ಮೀನಾರಾಯಣ ನಡ್ಕ, ದಾಮೋದರ ನಾರ್ಕೋಡು, ಜಯಲಲಿತಾ ಕೆ.ಎಸ್, ನಳಿನಿ ಸೂರಯ್ಯ, ಶೈಲೇಶ್ ಅಂಬೆಕಲ್ಲು, ದೊಡ್ಡಣ್ಣ ಬರೆಮೇಲು, ಸದಾನಂದ ಮಾವಜಿ, ಪ್ರೇಮ ಕೆ ಎಲ್, ಜ್ಞಾನೇಶ್ ಎನ್. ಎ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಮೇರ್ಕಜೆ, ಸಹಾಯಕ ಪ್ರ.ವ್ಯವಸ್ಥಾಪಕ ಕುಸುಮಾಧರ ಗುಡ್ಡೆ, ಸಿಬ್ಬಂದಿಗಳು ಉಪಸ್ಥಿತರಿದ್ದರು.



