ಹಳೆಗೇಟು ಅಡ್ಕ ನಿವಾಸಿ ಯೂಸುಫ್ ಹಾಜಿ ನಿಧನ

0

ಹಳೆಗೇಟು ಅಡ್ಕ ನಿವಾಸಿ ಖಲೀದಿಯ ಶಾ ಮಿಲ್ ನಲ್ಲಿ ಉದ್ಯೋಗಿಯಾಗಿದ್ದ ಹಿರಿಯರಾದ ಯೂಸುಫ್ ಹಾಜಿ (70 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಡಿ 11ರಂದು ಸಂಜೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಯೂಸುಫ್ ರವರು ಹಳೇಗೇಟು ಖಲಿದಿಯಾ ಶಾ ಮಿಲ್ ನಲ್ಲಿ ಕಳೆದ 40 ವರ್ಷಗಳಿಂದ ಉದ್ಯೋಗಿಯಾಗಿದ್ದರು.
ಕಳೆದ ನಾಲ್ಕೈದು ದಿನಗಳ ಹಿಂದೆ ಅವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಿಧನರಾಗಿದ್ದಾರೆ.
ಮೃತರು ಪತ್ನಿ ಫಾತಿಮಾ,, ಪುತ್ರರಾದ ಶಮೀರ್, ನಿಸಾರ್, ಪುತ್ರಿಯರಾದ ಸಮೀನಾ, ರಸೀನಾ, ಸಕೀನಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.