ಬೆಳ್ಳಾರೆ : ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯ ಶಾಲಾ ವಿದ್ಯಾರ್ಥಿ ಪಾರ್ಲಿಮೆಂಟ್ ಉದ್ಘಾಟನೆ

0

ವಿದ್ಯಾರ್ಥಿ ನಾಯಕನಾಗಿ ಅಹ್ಮದ್ ಮುಫೀದ್
ವಿದ್ಯಾರ್ಥಿ ನಾಯಕಿ ಆಯಿಷತ್ ಶಾನಿಬ

ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ 2024 – 25 ನೇ ಶೈಕ್ಷಣಿಕ ಸಾಲಿನ ಶಾಲಾ ವಿದ್ಯಾರ್ಥಿ ಪಾರ್ಲಿಮೆಂಟ್ ನ್ನು ಇನ್ವೆಸ್ಟಿಚರ್ (Investiture) ಎಂಬ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮವನ್ನು
ಶಾಲಾ ಸಂಚಾಲಕರಾದ ಅಬ್ದುಲ್ ಖಾದರ್ ರವರು ಉದ್ಘಾಟಿಸಿ ಮಾತನಾಡಿದರು. ಅವರು ಶಾಲೆಯ ಸರ್ವತೋಮುಖ ಬೆಳವಣಿಗೆಗೆ
ವಿದ್ಯಾರ್ಥಿ ನಾಯಕರುಗಳ ಪಾತ್ರ ಬಹಳ ಮುಖ್ಯವಾಗಿದೆ. ಮಕ್ಕಳು ಭವಿಷ್ಯದಲ್ಲಿ ಉತ್ತಮ ಜವಾಬ್ದಾರಿಯುತ ಜೀವನವನ್ನು ನಡೆಸಲು ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳನ್ನು ತಿಳಿಸಿಕೊಡುವುದು ಬಹಳ ಅತ್ಯಗತ್ಯವಾದ ಹಾಗೂ ಮೌಲ್ಯಯುತವಾದ ಕೆಲಸವಾಗಿದೆ ಎಂದರು. ಶಾಲಾ ನಾಯಕರುಗಳಿಗೆ ಬ್ಯಾಡ್ಜ್ ವಿತರಿಸಿ ಶುಭಾರೈಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುನೈನಾ ಬಿ ಅವರು ನಾಯಕತ್ವದ ಬಗ್ಗೆ ಅರಿವನ್ನು ಮೂಡಿಸಿದರು.

ಶಾಲಾ ವಿದ್ಯಾರ್ಥಿ ನಾಯಕನಾಗಿ ಅಹ್ಮದ್ ಮುಫೀದ್ , ವಿದ್ಯಾರ್ಥಿ ನಾಯಕಿ ಆಯಿಷತ್ ಶಾನಿಬ , ಕ್ರೀಡಾ ಸಚಿವರಾಗಿ ಮುಹಮ್ಮದ್ ಸಿಮಾಕ್ ಮತ್ತು ಮುಹಮ್ಮದ್ ಸಮ್ಮಾಶ್, ಶಿಕ್ಷಣ ಸಚಿವರಾಗಿ ಮುಹಮ್ಮದ್ ಇಹಾನ್ ಮತ್ತು ಮೊಯ್ದೀನ್ ಬಾತಿಷ, ಸಾಂಸ್ಕೃತಿಕ ಮಂತ್ರಿಯಾಗಿ ನಿಹಲತ್ ಫಾತಿಮಾ ಮತ್ತು ಫಾತಿಮಾ ರಿದಾ, ಶಿಸ್ತು ಸಚಿವರಾಗಿ
ಮುಹಮ್ಮದ್ ತನ್ವೀರ್ ಮತ್ತು ಖಮರುನ್ನಿಸ, ಆರೋಗ್ಯ ಮಂತ್ರಿಯಾಗಿ ಮನ್ಹಾ ಫಾತಿಮಾ , ಮುಹಮ್ಮದ್ ಶಮ್ಮಾಸ್ ಎಸ್. ಬಿ , ಮತ್ತು ಮುಹಮ್ಮದ್ ಅಝ್ಮಾನ್, ವಾರ್ತಾ ಮತ್ತು ಸಂವಹನ ಮಂತ್ರಿಗಳಾಗಿ ಸಯ್ಯದ್ ಮುದಸ್ಸಿರ್ ಮತ್ತು ಮುಹಮ್ಮದ್ ನೂರುಲ್ ಐನ್ ಇವರಿಗೆ ಶಿಕ್ಷಕಿ ಸೆಕಿನ ಇವರಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಶಾಲಾ ಅಧ್ಯಕ್ಷರಾದ ಯು. ಹೆಚ್ . ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಕುಮಾರಿ ರೋಹಿತಾಕ್ಷಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ರಂಜಿತಾ ವಂದನಾರ್ಪಣೆಗೈದರು . ಶಿಕ್ಷಕಿ ಶ್ರೀಮತಿ ಕಮರುನ್ನಿಸಾ ಕಾರ್ಯಕ್ರಮ ನಿರೂಪಿಸಿದರು .