ಬೆಳ್ಳಾರೆ: ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಗೆ ಅರ್ಜಿ ಅಹ್ವಾನ

0

ವರ್ಲ್ಡ್ ಸ್ಕಿಲ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದಿರುವ ಭಾರತ್ ಸೇವಕ್ ಸಮಾಜದ ಅಂಗಿಕೃತ ಸಂಸ್ಥೆಯಾದ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ 2024-25ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಗೆ ದಾಖಲಾತಿ ಪಡೆಯಲು ಸೀಮಿತ ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತರಬೇತಿಯಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆ, ಪೂರ್ವ ಪ್ರಾಥಮಿಕ ಶಿಕ್ಷಣ, ಇಂಗ್ಲೀಷ್ ಸಂವಹನ ಕೌಶಲ್ಯ, ಅರ್ಟ್ ಮತ್ತು ಕ್ರಾಫ್ಟ್ ಶಿಕ್ಷಣ, ಬರವಣಿಗಾ ಕೌಶಲ್ಯ ಮುಂತಾದ ವಿಷಯಗಳ ಕುರಿತು ನುರಿತ ಅಧ್ಯಾಪಕರಿಂದ ಪ್ರಾಯೋಗಿಕ ಮತ್ತು ಸೈದ್ಧಾಂತಿಕ ತರಗತಿಗಳು ನಡೆಯಲಿದೆ. ಈ ತರಬೇತಿಯನ್ನು ಪಿಯುಸಿ ನಂತರದ ವಿದ್ಯಾಭ್ಯಾಸ ಹೊಂದಿದ ಆಸಕ್ತ ಯುವತಿಯರು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.