ದುಗ್ಗಲಡ್ಕ; ಅಡಿಕೆ ಅಂಗಡಿಯ ಸೋಲಾರ್ ಗೂಡಿಗೆ ಬೆಂಕಿ- ನಷ್ಟ

0


ದುಗ್ಗಲಡ್ಕದ ಅಡಿಕೆ ಅಂಗಡಿಯೊಂದರ ರಬ್ಬರ್ ಒಣಗಿಸುವ ಸೋಲಾರ್ ಗೂಡಿಗೆ ಆಕಸ್ಮಿಕ ಬೆಂಕಿ ಬಿದ್ದು ನಷ್ಟ ಸಂಭವಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಅಡಿಕೆ ಅಂಗಡಿಯ ಹಿಂಬದಿ ಸೋಲಾರ್ ಗೂಡು ನಿರ್ಮಿಸಿ ರಬ್ಬರ್ ಸ್ಕ್ರಾಪ್ ಮತ್ತು ಶೀಟ್ ಹಾಕಿದ್ದರು. ಇಂದು ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸೋಲಾರ್ ಟರ್ಪಲ್ ಸಂಪೂರ್ಣ ಸುಟ್ಟು ಹೋಗಿದ್ದು, ಸ್ವಲ್ಪ ಪ್ರಮಾಣದಲ್ಲಿ ರಬ್ಬರ್ ಶೀಟ್ ಮತ್ತು ಸ್ಕ್ರಾಪ್ ಕರಟಿಹೋಗಿದೆ. ಸ್ಥಳೀಯರು ತಕ್ಷಣ ಧಾವಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.