ನೆಲ್ಲೂರು ಕೆಮ್ರಾಜೆಯ ಬೊಳ್ಳಾಜೆ ಘಟ ಸಮಿತಿಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

0

ನೆಲ್ಲೂರು ಕೆಮ್ರಾಜೆಯ ಬೊಳ್ಳಾಜೆ ಘಟ ಸಮಿತಿಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವು
ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವದ ಅಂಗವಾಗಿ ಗುತ್ತಿಗಾರು ವಲಯದ ಬೊಳ್ಳಾಜೆ ಘಟ ಸಮಿತಿ ವತಿಯಿಂದ ಬೊಳ್ಳಜೆಯ ಸರಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೊಳ್ಳಾಜೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.


ಈ ಸಂದರ್ಭ ದಲ್ಲಿ ಗುತ್ತಿಗಾರು ವಲಯದ ಸಂಯೋಜಕೀ ಶ್ರೀಮತಿ ಸವಿತ, ಸೇವಾ ದೀಕ್ಷಿತೆ ಸಕಲ, ಘಟ ಸಮಿತಿ ಅಧ್ಯಕ್ಷರಾದ ಸೀತಾರಾಮ ಚೆನ್ನಡ್ಕ, ಪದಾಧಿಕಾರಿಗಳಾದ ಪವಿತ್ರ, ಜಯಂತಿ, ಸಂಘದ ಸದಸ್ಯರು, ಶಾಲೆಯ ಪೋಷಕರು ಭಾಗವಹಿಸಿದ್ದರು. ಸ್ವಚ್ಛತಾ ಕಾರ್ಯಕ್ರಮದ ಬಳಿಕ ಶಾಲೆಯ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.