ಮಡಪ್ಪಾಡಿ : ಬಾಳಿಕ್ಕಳ – ಪಣಿಯಾಲ ರಸ್ತೆಗೆ ಮತ್ತು ಶೆಟ್ಟಿಮಜಲು ಎಂಬಲ್ಲಿ ರಾತ್ರಿ ರಸ್ತೆಗೆ ಬಿದ್ದ ಮರ

0

ಮರ ತೆರವುಗಳಿಸಿದ ಸ್ಥಳೀಯರು

ಮಡಪ್ಪಾಡಿಯಿಂದ ಕಡ್ಯವನ್ನು ಸಂಪರ್ಕಿಸುವ ಬಾಳಿಕಳ – ಪಣಿಯಾಲದಲ್ಲಿ ನಿನ್ನೆ ರಾತ್ರಿ ರಸ್ತೆಗೆ ಮರ ಬಿದ್ದು ಸಂಪರ್ಕ ಕಡಿತಗೊಂಡಿತ್ತು. ಅಲ್ಲದೇ ಸುಮಾರು 6 ವಿದ್ಯುತ್ ಕಂಬಗಳು‌ ನೆಲಕ್ಕುರಿಳಿದವು.

ಬಳಿಕ ಸಾರ್ವಜನಿಕರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಲಾಯಿತು.‌ ಅಲ್ಲದೇ ಸೇವಾಜೆಯಿಂದ ಮಡಪ್ಪಾಡಿ ಸಂಪರ್ಕಿಸುವ ಶೆಟ್ಟಿಮಜಲು ಎಂಬಲ್ಲಿಯೂ ರಸ್ತೆಗೆ ಮರ ಬಿದ್ದಿತ್ತು.‌ ಪರಿಣಾಮ ಪತ್ರಿಕೆ ಸರಬರಾಜು ಮಾಡುವ ಜೀಪು ಸೇರಿದಂತೆ ಸಾರ್ವಜನಿಕ ರಿಗೆ ವಾಹನದಲ್ಲಿ‌ ತೆರಳಲು ಅನಾಕೂಲವಾಯಿತು.‌ ಬಳಿಕ ಮರ ತೆರವುಗೊಳಿಸಲಾಯಿತು.