ಗುತ್ತಿಗಾರು ಗ್ರಾಮಸಭೆ

0

ಗುತ್ತಿಗಾರು ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಹಂತದ ಗುತ್ತಿಗಾರು ಮತ್ತು‌ ನಾಲ್ಕೂರು ಗ್ರಾಮದ ಗ್ರಾಮಸಭೆಯು ಇಂದು ನಡೆಯಿತು.

ಗ್ರಾಮಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಮಿತ್ರ ವಹಿಸಿದ್ದರು.

ಟಿ.ಬಿ.ಆರ್.ಸಿ.‌ಸುಳ್ಯ ಇದರ ಬಿ.ಐ.ಆರ್. ದೇವರಾಜ್ ಮುತ್ಲಾಜೆ ನೋಡೆಲ್ ಅಧಿಕಾರಿಯಾಗಿದ್ದರು.

ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ, ಪಂಚಾಯತ್ ಉಪಾಧ್ಯಕ್ಷೆ ಭಾರತಿ ಸಾಲ್ತಾಡಿ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ಕ್ಲಕ್೯ ಅನಿತಾ ವರದಿ ಮಂಡಿಸಿದರು.

ಬಳಿಕ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.

ಆರೋಗ್ಯ ಇಲಾಖೆಯ ಅಧಿಕಾರಿ ನಂದಕುಮಾರ್ ರವರು ಮಾಹಿತಿ ನೀಡಿ ಡೆಂಗ್ಯು‌ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಗ್ರಾಮಸ್ಥರು ಜಾಗ್ರತರಯಿಂದಿರಬೇಕು.‌ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.‌ ಡೆಂಗ್ಯು ಸೊಳ್ಳೆ ಹಗಲು‌ ಹೊತ್ತಿನಲ್ಲಿ‌ ಕಚ್ಚುವುದರಿಂದ ಕೃಷಿ ಕೆಲಸ ಮಾಡುವವರು ಮೈತುಂಬ ಬಟ್ಟೆ ಹಾಕಿಕೊಳ್ಳಬೇಕು ಎಂದು‌ ಮಾಹಿತಿ ನೀಡಿದರು. ಹಾಗೂ ಪುನಿತ್ ರಾಜ್ ಕುಮಾರ್ ಹೃದಯ ಜ್ಯೋತಿಯೋಜನೆ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ದೊರೆಯುವ ಬಗ್ಗೆಯೂ ಮಾಹಿತಿ ನೀಡಿದರು.‌ ಗುತ್ತಿಗಾರಿಗೆ ಫರ್ಮನೆಂಟ್ ವೈದ್ಯು ಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ರಸ್ತೆ ಬದಿ ವಿದ್ಯುತ್ ಲೈನ್ ಕೆಳಗಡೆ ಸಾಮಾಜಿಕ ಅರಣ್ಯದ ಹೆಸರಲ್ಲಿ ಗಿಡ ನೆಡುವುದು ಬೇಡ.‌ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದರು.