ಸುಳ್ಯದಲ್ಲಿ ಹೆಚ್ಚಾದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ

0

ಜಯನಗರ, ಹಳೆಗೇಟು ಭಾಗದಲ್ಲಿ ಗ್ರಾಹಕರ ಪರದಾಟ

ಸುಳ್ಯದ ತಾಲೂಕು ಕೇಂದ್ರದ ಬಿಎಸ್‌ಎನ್‌ಎಲ್ ನೆಟ್ವರ್ಕ್ ಸಮಸ್ಯೆ ಕಳೆದ 2 ದಿನ ದಿಂದ ಹೆಚ್ಚಾದಂತೆ ಕಂಡು ಬರುತ್ತಿದೆ.

ಸುಳ್ಯ ನಗರದ ಜಯನಗರ, ಹಳೇಗೇಟು ಭಾಗದಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ತೀವ್ರಗೊಂಡಿದ್ದು ಕಳೆದ ಕೆಲವು ದಿನಗಳಿಂದ ಗ್ರಾಹಕರಿಗೆ ಸಮಸ್ಯೆ ಎದುರಾಗಿದೆ.

ಅ.1 ರಂದು ಬೆಳಗ್ಗಿನಿಂದಲೇ ಜಯನಗರ, ಹಳೆಗೇಟು ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಎಚ್ಚಾಗಿದ್ದು, ಗ್ರಾಹಕರಿಗೆ ಕರೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ಆಗಿದೆ.
ಪದೇ ಪದೇ ನೆಟ್‌ವರ್ಕ್ ಕಡಿತವಾಗುವುದು, ಕರೆ ಮಾಡಿ ಮಾತನಾಡುತ್ತಿದ್ದಂತೆ ಅರ್ಧಕ್ಕೆ ಕಾಲ್ ಕಟ್ ಆಗುತ್ತಿದೆ. ಬಿಎಸ್‌ಎನ್‌ಎಲ್ ಇಂಟರ್‌ನೆಟ್ ಉಪಯೋಗಿಸುವವರಿಗೂ ಸಮಸ್ಯೆ ಆಗಿದೆ.

ನೆಟ್‌ವರ್ಕ್ ಒದಗಿಸುವ ಟವರ್ ಕರೆಂಟ್ ಇದ್ದರೂ ನೆಟ್‌ವರ್ಕ್ ಇರುವುದಿಲ್ಲ. ಕಾಲ‌ಕಾಲಕ್ಕೆ ಬ್ಯಾಟರಿ ಅಳವಡಿಕೆ,ತಾಂತ್ರಿಕ ಸಮಸ್ಯೆ ಸರಿಪಡಿಸದ ಕಾರಣ ಇಲ್ಲಿನ ಟವರ್ ಮತ್ತು ನೆಟ್‌ವರ್ಕ್ ತೀರಾ ‘ವೀಕ್’ ಆಗುತ್ತಿದೆ ಎಂದು ಸಾರ್ವಜನಿಕರು ದೂರಿ ಕೊಳ್ಳುತ್ತಿದ್ದಾರೆ.