ಬೊಳುಗಲ್ಲು ಭಾಗದಲ್ಲಿ ಕಾಡಾನೆಗಳ ಹಿಂಡು : ಕೃಷಿ‌ ಹಾನಿ

0

ಮಂಡೆಕೋಲು ಗ್ರಾಮದ ಬೊಳುಗಲ್ಲು ಭಾಗದಲ್ಲಿ ಆ.1ರಂದು ರಾತ್ರಿ ಕಾಡಾನೆಗಳ ಹಿಂಡು ಕೃಷಿ ತೋಟಕ್ಕೆ ಹಾನಿ ಮಾಡಿದೆ. ರಾತ್ರಿ 8 ಗಂಟೆಗೆ ಬಂದ 5 ಕಾಡಾನೆಗಳ ಹಿಂಡು ರಾತ್ರಿ ವರೆಗೆ ಬೊಳುಗಲ್ಲು ಭಾಗದ ಕೃಷಿಕರ ತೋಟದಲ್ಲಿ ಸುತ್ತಾಡಿಕೊಂಡಿತ್ತೆಂದು ಮಾಹಿತಿ ದೊರೆತಿದೆ.

“ವಿಪರೀತ ಮಳೆ ಕಾರಣ ತೋಟದಲ್ಲಿ ನೀರು ನಿಂತು ಕೃಷಿ ಹಾನಿಯಾಗುತ್ತಿರುವ ಬೆನ್ನಲ್ಲೇ ಕಾಡಾನೆಗಳು ಕೂಡಾ ತೋಟವನ್ನು ಹಾನಿಗೊಳಿಸುತ್ತಿದೆ. ಆನೆಗಳು‌ ಬಾರದಂತೆ ಇಲಾಖೆ‌ ಕ್ರಮಕೈಗೊಳ್ಳಬೇಕೆಂದು ಕೃಷಿಕ ಶುಭಕರ ಬೊಳುಗಲ್ಲು ತಿಳಿಸಿದ್ದಾರೆ.