ಸುಳ್ಯ ಸ.ಮಾ.ಹಿ.ಪ್ರಾ.ಶಾಲಾ ಮುಂಭಾಗದಲ್ಲಿ ಅಪಾಯದಲ್ಲಿರುವ ವಿದ್ಯುತ್ ಕಂಬ

0


ಸುಳ್ಯ ಸ.ಮಾ.ಹಿ.ಪ್ರಾ.ಶಾಲಾ ಮುಂಭಾಗದಲ್ಲಿ ಜ್ಯೋತಿ ಸರ್ಕಲ್ ಮುಖ್ಯ ರಸ್ತೆ ರಿಕ್ಷಾ ನಿಲ್ದಾಣದ ಬಳಿ ಬರೆಯಲ್ಲಿ ವಿದ್ಯುತ್ ಕಂಬವೊಂದು ಅಪಾಯದ ಸ್ಥಿತಿಯಲ್ಲಿದೆ.
ಸುರಿಯುತ್ತಿರುವ ಭಾರೀ ಮಳೆಗೆ ಬರೆಯ ಮಣ್ಣು ಜರಿದು ಬರೆ ಕುಸಿದು ಬಿದ್ದರೆ ವಿದ್ಯುತ್ ಕಂಬ ಕೂಡ ಬೀಳಲಿದೆ ಎಂಬ ಆತಂಕ ಎದುರಾಗಿದೆ.
ಈ ಪರಿಸರದಲ್ಲಿ ಮೂರು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಓಡಾಡುವ ಪ್ರದೇಶವಾಗಿದೆ. ಸಂಬಂಧ ಪಟ್ಟವರು ಈ ಬಗ್ಗೆ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.