ಯೇನೆಕಲ್ಲು ಪ್ರೌಢಶಾಲಾ ಶಿಕ್ಷಕಿ ಹರ್ಷಲತಾ ಎಂ.ಜೆ ಬೆಳ್ಳಾರೆ ಕೆ.ಪಿ.ಎಸ್. ಗೆ ವರ್ಗಾವಣೆ

0

ಯೇನೆಕಲ್ಲು ಸರಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಹರ್ಷಲತ ಎಂ.ಜೆಯವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಗೆ (ಪ್ರೌಢಶಾಲಾ ವಿಭಾಗ) ವರ್ಗಾವಣೆಗೊಂಡಿರುತ್ತಾರೆ. ಇವರು 2020 ಸೆ. 4ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಕತ್ತಡ್ಕದಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ, ಪದೋನ್ನತಿ ಹೊಂದಿ ಯೇನೆಕಲ್ಲು ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದರು. ಇವರು ಈ ಹಿಂದೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರದಲ್ಲಿಯೂ ಸೇವೆ ಸಲ್ಲಿಸಿದ್ದರು.