ಎಡಮಂಗಲ: ಚರಂಡಿಯಂತಾದ ಪುಚ್ಚಾಜೆ – ಪರ್ಲ ರಸ್ತೆ

0

ಎಡಮಂಗಲ ಗ್ರಾಮದ ಎಡಮಂಗಲದಿಂದ ಪುಚ್ಚಾಜೆ-ಪರ್ಲಕ್ಕೆ ಹೋಗುವ ಕಚ್ಚಾ ರಸ್ತೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ, ದುರಸ್ತಿಯಾಗದೆ ರಸ್ತೆಯೇ ಚರಂಡಿಯಂತಾಗಿದೆ. ಈ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ವಾಹನ ಸವಾರರು, ಶಾಲೆಗೆ ಹೋಗುವ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ. ಅನಾರೋಗ್ಯದವರನ್ನು ಹೊತ್ತುಕೊಂಡು ಹೋಗುವ ಪರಿಸ್ಥಿತಿ ಇದೆ. ಸುಮಾರು 50 ವರ್ಷಗಳಿಂದಲೂ ಈ ರಸ್ತೆಯಿದ್ದು, ಈ ರಸ್ತೆಯ ಮೂಲಕ ಸುಮಾರು 20 ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮನೆ ಇದೆ. ರಸ್ತೆಯ ದುರವಸ್ಥೆಯ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಶಾಸಕರ ಗಮನಕ್ಕೆ ತಂದರೂ ಈವರೆಗೆ ಯಾವುದೇ ಪ್ರಯೋಜನ ಆಗಿರುವುದಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಸರಿಯಾದ ಕ್ರಮವನ್ನು ಕೈಗೊಳ್ಳದಿದ್ದಲ್ಲಿ ಈ ರಸ್ತೆಯ ಬಳಕೆದಾರರು ಉಗ್ರ ಹೋರಾಟವನ್ನು ಕೈಗೊಳ್ಳುವುದಾಗಿ ಸುದ್ದಿಗೆ ತಿಳಿಸಿದ್ದಾರೆ.