ನಡುಗಲ್ಲು : ಉತ್ರಂಬೆ ಬಸ್ ತಂಗುದಾಣ ಬಳಿ ಬೊಲೆರೋ ಗಾಡಿ ವಿದ್ಯುತ್ ಕಂಬಕ್ಕೆ ಡಿಕ್ಕಿ, ಪಲ್ಟಿ

0

ನಡುಗಲ್ಲಿನ ಉತ್ರಂಬೆ ಬಸ್ ತಂಗುದಾಣ ಬಳಿ ಬೊಲೆರೋ ಗಾಡಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿ ಬಿದ್ದ ಘಟನೆ ಆ.2 ರ ರಾತ್ರಿ ನಡೆದಿದೆ.

ಗುತ್ತಿಗಾರಿನಿಂದ ನಡುಗಲ್ಲಿಗೆ ಬರುತಿದ್ದ ಬೊಲೆರೋ ಗಾಡಿ ರಾತ್ರಿ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿ ಯಾಗಿ ಬಿದ್ದಿದೆ ವಿದ್ಯುತ್ ಕಂಬವು ಮುರಿದು ಬಿದ್ದಿದ್ದು ಸಂಪರ್ಕ ಕಡಿತ ಗೊಂಡ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.