ಸುಳ್ಯ ವಕೀಲರ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

0

ದಿಲೀಪ್ ಬಾಬ್ಲುಬೆಟ್ಟು ರಿಗೆ ಭರ್ಜರಿ‌ ಜಯ

ಸುಳ್ಯ ವಕೀಲರ ಸಂಘದ ಉಪಾಧ್ಯಕ್ಷತೆಗೆ‌ ನಡೆದ ಚುನಾವಣೆಯಲ್ಲಿ ದಿಲೀಪ್ ಬಾಬ್ಲುಬೆಟ್ಟು ಭರ್ಜರಿ‌ ಜಯಗಳಿಸಿದ್ದಾರೆ.

ವಕೀಲರ ಸಂಘದ ಅಧ್ಯಕ್ಷ ಸೇರಿದಂತೆ ಉಳಿದೆಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದ್ದರೂ ಉಪಾಧ್ಯಕ್ಷ ಸ್ಥಾನಕ್ಕೆ ದಿಲೀಪ್ ಬಾಬ್ಲುಬೆಟ್ಟು, ಪುಷ್ಪರಾಜ್ ಗಾಂಭೀರ್ ಹಾಗೂ ಸುಬ್ರಹ್ಮಣ್ಯ ಭಟ್ ಕಣದಲ್ಲಿ ಉಳಿದರು.

ಇಂದು‌ ವಕೀಲರ ಸಂಘದ ಕಚೇರಿಯಲ್ಲಿ ಬೆಳಗ್ಗಿನಿಂದ ಚುನಾವಣೆ ನಡೆದು, ಸಂಜೆ ಮತ ಎಣಿಕೆ ನಡೆಯಿತು.

103 ಮಂದಿ‌ ಮತದಾರರಲ್ಲಿ 88 ಮಂದಿ ಮತ ಚಲಾಯಿಸಿದ್ದು, ದಿಲೀಪ್ ಬಾಬ್ಲುಬೆಟ್ಟು 75 ಮತ ಪಡೆದು ಭರ್ಜರಿ ಜಯ ಗಳಿಸಿದರೆ, ಪುಷ್ಪರಾಜ್ ಹಾಗೂ ಸುಬ್ರಹ್ಮಣ್ಯ ಭಟ್ ಪರಾಭವಗೊಂಡರು. 3 ಮತ ಅಸಿಂಧುಗೊಂಡಿತ್ತು.