ಅರೆಭಾಷೆಯಲ್ಲಿ ಪುಸ್ತಕ ಪ್ರಕಟಣೆಗೆ ಆಹ್ವಾನ

0

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಕಟಣೆ ಯೋಜನೆಯಡಿ ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಲೇಖಕರು ಅರೆಭಾಷೆಯಲ್ಲಿ ಕಥೆ, ಕವನ, ಲೇಖನ, ಅಜ್ಜಿ ಕಥೆ, ಜಾನಪದ, ವಿಚಾರ ಸಾಹಿತ್ಯ ಲಲಿತ ಪ್ರಬಂಧ, ಸಂಶೋಧನ ಕೃತಿಗಳು ಮತ್ತಿತರವನ್ನು ಅರೆಭಾಷೆಯಲ್ಲಿ ಬರಹದಲ್ಲಿಬರೆದು ಹಸ್ತಪ್ರತಿಯನ್ನು ಅಕಾಡೆಮಿಗೆ ಸಲ್ಲಿಸುವಂತೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಮತ್ತು ರಿಜಿಸ್ಟ್ರಾರ್ ಚಿನ್ನಸ್ವಾಮಿ ಅವರು ಕೋರಿದ್ದಾರೆ.

ತಮ್ಮ ಹಸ್ತಪ್ರತಿಗಳನ್ನು ಸಲ್ಲಿಸಲು 2024 ಆಗಸ್ಟ್ 31 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಧ್ಯಕ್ಷರು/ ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಸೀಟು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ. ಮೊ ನಂ ೬೩೬೨೫೨೨೬೭೭ ಸಂಪರ್ಕಿಸಬಹುದು. arebase [email protected].

ಪುಸ್ತಕಗಳ ಆಯ್ಕೆಯ ಹಕ್ಕು ಅಕಾಡೆಮಿಯದಾಗಿದೆ. ಹಾಗೂ ಬರಹ ಕನಿಷ್ಟ ೭೦ ರಿಂದ ೮೦ ಪುಟಗಳಿರಬೇಕು ಎಂದು ಪ್ರಕಟಣೆ ತಿಳಿಸಿದೆ.