ಸೈಂಟ್ ಬ್ರಿಜಿಡ್ಸ್ ಚರ್ಚಿನಲ್ಲಿ ಹಿರಿಯರ ದಿನಾಚರಣೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮ

0

ಕಥೋಲಿಕ ಸಭಾ ಸುಳ್ಯ ಘಟಕ ಮತ್ತು ಪಾಲನಾ ಪರಿಷತ್ ವತಿಯಿಂದ ಸೈಂಟ್ ಬ್ರಿಜಿಡ್ಸ್ ಚರ್ಚಿನಲ್ಲಿ ಹಿರಿಯರ ದಿನಾಚರಣೆಯನ್ನು ಆ.11 ರಂದು ಆಚರಿಸಲಾಯಿತು.

ಹಿರಿಯರಿಗಾಗಿ ಬೆಳಗಿನ ದಿವ್ಯ ಬಲಿ ಪೂಜೆಯನ್ನು ಕಲ್ಲುಗುಂಡಿಯ ಸವೇರಪುರ ಚರ್ಚಿನ ಧರ್ಮ ಗುರುಗಳಾದ ರೆ.ಫಾ. ಪೌಲ್ ಕ್ರಾಸ್ತರು ನೆರವೇರಿಸಿ ಕೊಟ್ಟರು.

ಹಿರಿಯರಿಗಾಗಿ ಕೆಲವು ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಬಹುಮಾನವನ್ನು ಹಂಚಲಾಯಿತು. ಚರ್ಚಿನ ವೈ .ಸಿ. ಎಸ್ ಸಂಘಟನೆಯಿಂದ ಒಂದು ಅಪರೂಪದ ಸ್ಕಿಟ್ ಈ ಸಂದರ್ಭದಲ್ಲಿ ನಡೆಸಲಾಯಿತು.

ಹಿರಿಯರ ಪರವಾಗಿ ಚರ್ಚ್ ಪಾಲನ ಮಂಡಳಿಯ ಮಾಜಿ ಉಪಾಧ್ಯಕ್ಷ ಆಗಿರುವ ಟಿ ಅರಲಪ್ಪನ್ ಅವರು ಮಾತನಾಡಿ ಅವರು ನಡೆದು ಬಂದ ಹಿಂದಿನ ಕಷ್ಟದ ದಿನಗಳನ್ನು ಮೆಲುಕು ಹಾಕಿದರು.

ಚರ್ಚಿನ ಹಾಗೂ ಕಥೋಲಿಕ್ ಸಭಾದ ಸುಳ್ಯ ಘಟಕದಲ್ಲಿ ನಿರಂತರವಾಗಿ ಸೇವೆ ನೀಡುತ್ತಿರುವ ಸಂತೋಷ್ ಕ್ರಾಸ್ತ, ಮತ್ತು ಜೂಲಿಯಾನ ಕ್ರಾಸ್ತಾ ಇವರನ್ನು ಗುರುತಿಸಿ ಕಥೋಲಿಕ್ ಸಭಾ ವತಿಯಿಂದ ಸನ್ಮಾನಿಸಲಾಯಿತು.

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಅಧ್ಯಕ್ಷ ಸ್ಥಾನದಿಂದ ಧರ್ಮಗುರುಗಳಾದ ರೇ.ಫಾ. ವಿಕ್ಟರ್ ಡಿಸೋಜ ಅವರು ಸಭೆಯನ್ನು ಉದ್ದೇಶಿಸಿ ಹಿತನುಡಿಗಳನ್ನು ನುಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳೆಲ್ಲರೂ ಹಿರಿಯರ ದಿನಾಚರಣೆಗೆ ಶುಭ ಕೋರಿದರು. ವೇದಿಕೆಯಲ್ಲಿ ಚರ್ಚಿನ ಧರ್ಮ ಗುರುಗಳಾದ ರೇ.ಫಾ. ವಿಕ್ಟರ್ ಡಿಸೋಜ, ಕಲ್ಲು ಗುಂಡಿ ಸವೆರಪುರ ಚರ್ಚಿನ ಧರ್ಮ ಗುರುಗಳಾದ ರೇ.ಫಾ. ಪೌಲ್ ಕ್ರಾಸ್ತ, ಪುತ್ತೂರು ವಾರಾಡೋ ಆಂತರಿಕ ಲೆಕ್ಕಪರಿಶೋಧಕ ಮೇಲ್ವಿನ್ ಡಿಸೋಜಾ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ನವೀನ್ ಮಚಾದೊ, ಸೈಂಟ್ ಬ್ರಿಜಿಡ್ಸ್ ಶಾಲೆಯ ಮುಖ್ಯೋಪಾಧ್ಯಾಯನಿ ಸಿ. ಅಂತೋನಿಮೇರಿ, ಸಿ. ಗ್ರೇಸಿ, ನಗರ ಪಂಚಾಯತ್ ಸದಸ್ಯರಾದ ಡೇವಿಡ್ ದೀರ ಕ್ರಾಸ್ತಾ, ಬ್ರ. ಫ್ರಾನ್ಸಿಸ್, ಕಥೋಲಿಕ್ ಸಭಾ ಕಾರ್ಯದರ್ಶಿ ರೊನಾಲ್ಡ್ ಮೊಂತೆರೋ,ಸಿ. ಸಿಸಿಲಿ, ಉಪಸ್ಥಿತರಿದ್ದರು.
ಕಥೋಲಿಕ್ ಸಭಾ ಅಧ್ಯಕ್ಷರಾದ ಪ್ರೇಮ್ ಪ್ರಕಾಶ್ ಎಲ್ಲರನ್ನು ಸ್ವಾಗತಿಸಿದರು. ಸಭೆಯಲ್ಲಿ ಹಾಜರಿದ್ದ ಎಲ್ಲರಿಗೂ ಮಧ್ಯಾಹ್ನದ ಭೋಜನ ಏರ್ಪಡಿಸಲಾಗಿತ್ತು. ಭೋಜನವನ್ನು ತಯಾರಿಸಿದ ಹೊನ್ನಪ್ಪ ಗೌಡ ಬಾಂಜಿಕೋಡಿ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸುಮಾರು 84 ವಯಸ್ಸಿನ ಹಿರಿಯರಾದ ಸಿ. ಗ್ರೇಸಿ ಅವರು ತಮ್ಮ ಅದ್ಭುತ ಹಾಡುಗಳ ಮೂಲಕ ಎಲ್ಲರನ್ನು ಮನರಂಜಿಸಿದರು. ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ, ಜೂಲಿಯಾನ ಕ್ರಾಸ್ತಾ ಕಾರ್ಯಕ್ರಮವನ್ನು ನಿರೂಪಿಸಿದರು. ಚರ್ಚಿನ ಎಲ್ಲಾ ಹಿರಿಯರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಾಯ ನೀಡಿದ ದಾನಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕಥೋಲಿಕ್ ಸಭಾದ ಮಾಜಿ ಅಧ್ಯಕ್ಷರಾದ ಗಾಡ್ ಫ್ರೀಮೊಂತೆರೋ ವಂದನಾರ್ಪಣೆ ನೆರವೇರಿಸಿ ಕೊಟ್ಟರು.
ಸುಮಾರು 200ಕ್ಕೂ ಅಧಿಕ ಮಂದಿ ಸಭೆಯಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.