ಶಿಕ್ಷಣ ಇಲಾಖಾ ಕರಾಟೆಯಲ್ಲಿ ಜ್ಞಾನದೀಪ ಎಲಿಮಲೆ ಶಾಲೆಗೆ 6 ವಿದ್ಯಾರ್ಥಿಗಳು ಪ್ರಥಮ

0

ಶಾಲಾ ಶಿಕ್ಷಣ ಇಲಾಖೆ ಹಾಗೂ ಕೆಪಿಎಸ್ ಬೆಳ್ಳಾರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೆಪಿಎಸ್ ಬೆಳ್ಳಾರೆಯಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜ್ಞಾನದೀಪ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ, ಆರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು ಎರಡು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಪ್ರಾಥಮಿಕ ಶಾಲಾ ಬಾಲಕಿಯರ 35 ಕೆಜಿ ವಿಭಾಗದಲ್ಲಿ ಪ್ರಜ್ಞಾ.ಜಿ ಪ್ರಥಮ, 45 ಕೆಜಿ ವಿಭಾಗದಲ್ಲಿ ಅನ್ಸಿಕಾ ಪ್ರಥಮ, 40 ಕೆಜಿ ವಿಭಾಗದಲ್ಲಿ ಚಲನಾ ದ್ವಿತೀಯ, ಬಾಲಕರ ವಿಭಾಗದಲ್ಲಿ ಪೃಥ್ವಿನ್ ದ್ವಿತೀಯ, ಪ್ರೌಢಶಾಲಾ ಬಾಲಕರ 30 ಕೆ. ಜಿ. ವಿಭಾಗದಲ್ಲಿ ಭವಿತ್. ಡಿ. ಕೆ. ಪ್ರಥಮ, 45 ಕೆಜಿ ವಿಭಾಗದಲ್ಲಿ ಚೇತನ್ ಮುಂಡೋಡಿ ಪ್ರಥಮ, ಬಾಲಕಿಯರ ವಿಭಾಗದಲ್ಲಿ ರಕ್ಷಿತಾ 35 ಕೆಜಿ ವಿಭಾಗದಲ್ಲಿ ಪ್ರಥಮ, ಶ್ರೇಯಾ.ಕೆ.ಪಿ. 40 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಇವರು ಮಂಗಳೂರಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುಳ್ಯ ತಾಲೂಕು ತಂಡವನ್ನು ಪ್ರತಿನಿಧಿಸಲಿದ್ದಾರೆ.