ಸುಳ್ಯ ಲ್ಯಾಂಪ್ ಸಹಕಾರಿ ಸಂಘಕ್ಕೆ ಡಿಸಿಸಿ ಬ್ಯಾಂಕ್ ಪ್ರೋತ್ಸಾಹಕ ಪ್ರಶಸ್ತಿ

0

ಸುಳ್ಯ ಲ್ಯಾಂಪ್ಸ್ ಸಹಕಾರ ಸಂಘಕ್ಕೆ ಸತತ 3ನೇ ಬಾರಿಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ ಲಭಿಸಿದೆ. ಆ. 14ರಂದು ನಡೆದ ಬ್ಯಾಂಕಿನ ಮಹಾ ಸಭೆಯಲ್ಲಿ ಪ್ರೊತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸೀತಾನಂದ ಎಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಡಿ ಹಾಗೂ ನಿರ್ದೇಶಕ ಮಾಧವ ಸುಬ್ರಮಣ್ಯ ಉಪಸ್ಥಿತರಿದ್ದರು.