Home Uncategorized ದೇವಚಳ್ಳ : ಮರ ಕಡಿದು‌ ಸಾಗಾಟಕ್ಕೆ ಯತ್ನ : ಅರಣ್ಯ ಇಲಾಖೆ‌ ತಡೆ – ಮರ...

ದೇವಚಳ್ಳ : ಮರ ಕಡಿದು‌ ಸಾಗಾಟಕ್ಕೆ ಯತ್ನ : ಅರಣ್ಯ ಇಲಾಖೆ‌ ತಡೆ – ಮರ ಸಹಿತ ವಾಹನಗಳ ವಶ

0

ದೇವಚಳ್ಳ‌ ಗ್ರಾಮದ ಮುಂಡೋಡಿ ಎಂಬಲ್ಲಿ‌ ಮರ ಕಡಿದು ಸಾಗಾಟ ಮಾಡಲು ಯತ್ನ‌ ನಡೆಸಿದಾಗ ಅರಣ್ಯ ಇಲಾಖೆಯವರು ತಡೆ ಮಾಡಿ, ಮರ ಸಹಿತ ವಾಹನಗಳನ್ನು ವಶ ಪಡಿಸಿಕೊಂಡಿರುವ ಘಟನೆ ಡಿ.13ರಂದು ವರದಿಯಾಗಿದೆ.

ದೇವಚಳ್ಳ ಗ್ರಾಮದ ಮುಂಡೋಡಿ ಎಂಬಲ್ಲಿ ನಾಗೇಶ್ ಏಮ್ ಆರ್ ರವರ ಜಾಗದಲ್ಲಿ 1 ಹೆಬ್ಬಲಸು, 1 ಮಾವು ಮರವನ್ನು ಕಡಿದು ದಿಮ್ಮಿಗಳನ್ನಾಗಿ ಪರಿವರ್ತಿಸಿ ಸಾಗಾಟ ಗೊಳಿಸಲು ಯತ್ನಿಸುವ ಸಮಯದಲ್ಲಿ ಬಂದ ಖಚಿತ ಮಾಹಿತಿಯಂತೆ ನೆಲ್ಲೂರು ಕೆಮ್ರಾಜೆ ಶಾಖಾ ಉಪ ವಲಯ ಅರಣ್ಯ ಅಧಿಕಾರಿ ಶ್ರೀಮತಿ ಸೌಮ್ಯ ಪಿ ಎನ್ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಹೆಬ್ಬಲಸು ಹಾಗೂ ಮಾವು ಜಾತಿಯ 10 ದಿಮ್ಮಿಗಳು, 1 ಸ್ವರಾಜ್ ಮಜ್ದಾ ಲಾರಿ, 1 ಕ್ರೇನ್ ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ ಅಂದಾಜು 10 ಲಕ್ಷ ಆಗಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋಣಿ ಎಸ್ ಮರಿಯಪ್ಪ ರವರ ನಿರ್ದೇಶನದಂತೆ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ ರವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯ ಅಧಿಕಾರಿ ಮಂಜುನಾಥ್ ರವರು ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಸೌಮ್ಯ. ಪಿ. ಏನ್, ವೆಂಕಟೇಶ್, ಜನಾರ್ದನ, ಸಂದೀಪ್, ಗಸ್ತು ಅರಣ್ಯ ಪಾಲಕರಾದ ನಿಂಗಪ್ಪ ಕೊಪ್ಪ, ಶಿವಾನಂದ, ಜಯಪ್ರಕಾಶ್, ಅರಣ್ಯ ವೀಕ್ಷಕ ಅಭಿಲಾಷ , ವಾಹನ ಚಾಲಕ ಪುರುಷೋತ್ತಮ ಪಾಲ್ಗೊಂಡಿದ್ದರು.

ಸ್ಥಳದ ಮಾಲಕರಾದ ದೇವಚಳ್ಳ ಗ್ರಾಮದ ಮುಂಡೋಡಿ ಮನೆಯ ನಾಗೇಶ್ ಎಂ ಆರ್ ಹಾಗೂ ಪ್ರಮುಖ ಆರೋಪಿ ಮರದ ವ್ಯಾಪಾರಿ ಹಾಗೂ ಕ್ರೇನ್ ಮಾಲಕ ಸುಳ್ಯ ಕಸಬಾ ದ ನಾವೂರು ನಿವಾಸಿ ಮಹಮ್ಮದ್ ಅಶ್ರಫ್ ಡಿ ಎಂ ರವರನ್ನು ದಸ್ತಗಿರಿ ಮಾಡಿ ವಿಚಾರಿಸಿ ಬಿಡುಗಡೆಗೊಳಿಸಲಾಯಿತು.

NO COMMENTS

error: Content is protected !!
Breaking