Home Uncategorized ಡಿ 27 ರಿಂದ 29 ರವರೆಗೆ ಜೂನಿಯರ್ ಕಾಲೇಜ್ ಅಮೃತ ಮಹೋತ್ಸವ ಪ್ರಯುಕ್ತ ಬೃಹತ್ ವಸ್ತು...

ಡಿ 27 ರಿಂದ 29 ರವರೆಗೆ ಜೂನಿಯರ್ ಕಾಲೇಜ್ ಅಮೃತ ಮಹೋತ್ಸವ ಪ್ರಯುಕ್ತ ಬೃಹತ್ ವಸ್ತು ಪ್ರದರ್ಶನ

0

ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ಅಮೃತ ಮಹೋತ್ಸವ ಡಿ. 27 28 ಮತ್ತು29 ರಂದು 29 ರಂದು ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಈ ಮೂರು ದಿನಗಳು ಬೃಹತ್ ವಸ್ತು ಪ್ರದರ್ಶನ ಶಾಲಾ ಮೈದಾನದಲ್ಲಿ ನಡೆಯಲಿದೆ.


ಶಿಕ್ಷಣ, ಉದ್ಯೋಗ, ವ್ಯಾಪಾರ, ಆಟೋಮೊಬೈಲ್, ಐಟಿ ಮುಂತಾದ ಕ್ಷೇತ್ರಗಳ ಮಾಹಿತಿಗಳೊಂದಿಗೆ ವಿವಿಧ ರೀತಿಯ 70ಕ್ಕೂ ಹೆಚ್ಚಿನ ಸ್ಟಾಲ್ ಗಳು ಇರಲಿವೆ. ಇದರೊಂದಿಗೆ ಪ್ರೌಢಶಾಲೆ ಹಾಗೂ ಕಾಲೇಜ್ ವಿಭಾಗದ ವಿದ್ಯಾರ್ಥಿಗಳಿಂದ ಕಲೆ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ವಿಶೇಷ ವಸ್ತು ಪ್ರದರ್ಶನ ನಡೆಯಲಿದ್ದು ಈ ವಿಶಿಷ್ಟ ಹಾಗೂ ಬೃಹತ್ ಮೇಳದಲ್ಲಿ ಸುತ್ತಮುತ್ತಲಿನ ಸಂಸ್ಥೆಯ ವಿದ್ಯಾರ್ಥಿಗಳು ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ವಸ್ತು ಪ್ರದರ್ಶನದ ಸಮಿತಿಯ ಸಂಚಾಲಕರಾದ ರಂಗನಾಥ ಪಿಎಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

NO COMMENTS

error: Content is protected !!
Breaking