ಜಯನಗರ ಮಸ್ಜಿದ್ ‌ಹಾಗೂ ಮದರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಜಯನಗರ ಜೆ ಯು ಎಂ ಎಂ ಕಮಿಟಿ ಆಶ್ರಯದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ
ಮಸ್ಜಿದ್ ವಠಾರದಲ್ಲಿ ನಡೆಯಿತು. ಮದರಸ ಸದರ್ ಮುಅಲ್ಲಿಮ್ ಶಫೀಕ್ ಹಿಮಮಿ ಪ್ರಾರ್ಥನೆ ನೆರವೇರಿಸಿದರು.

ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ಲಾ ಜಯನಗರ ರವರು ದ್ವಜಾರೋಹಣ ನೆರವೇರಿಸಿದರು. ಸದರ್ ಮುಅಲ್ಲಿಂ ಶಫೀಕ್ ಹಿಮಮಿ ಹಾಗೂ ಸಹದಿಯ ವಿದ್ಯಾರ್ಥಿ ಮಹಮ್ಮದ್ ಅಫ್ಲಲ್ ರವರು ಸಂದೇಶ ಭಾಷಣವನ್ನು ಮಾಡಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಹಸೈನಾರ್ ಜಯನಗರ ಸ್ವಾಗತಿಸಿ ವಂದಿಸಿದರು.
ಸಮಿತಿ ಸದಸ್ಯರು ರಫೀಕ್, ಸಿಯಾಬ್, ಹಾಗೂ ವಿದ್ಯಾರ್ಥಿಗಳು,ಪೋಷಕರು ಭಾಗವಹಿಸಿದ್ದರು.