ಸುಳ್ಯ ಪೊಲೀಸ್ ಠಾಣೆ ಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ

0

ಸುಳ್ಯ ಪೊಲೀಸ್ ಠಾಣೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸುಳ್ಯ ಠಾಣಾ ಉಪ ನಿರೀಕ್ಷಕರಾದ ಈರಯ್ಯ ದೂಂತೂರು ರವರು ದ್ವಜಾರೋಹಣ ನೆರವೇರಿಸಿದರು.

ದೇಶದ ಸಮಗ್ರತೆಯನ್ನು ಕಾಪಾಡುವುದು ಮತ್ತು ಸಮಾಜದ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದ್ದು ನಮ್ಮ ನಮ್ಮ ಸೇವೆಯಲ್ಲಿ ಇದನ್ನು ಚಾಚು ತಪ್ಪದೆ ಪಾಲಿಸ ಬೇಕೆಂದು ಸ್ವಾತಂತ್ರ್ಯ ದಿನದ ಸಂದೇಶ ಭಾಷಣವನ್ನು ಮಾಡಿದರು. ಅಪರಾಧ ತನಿಖಾ ವಿಭಾಗದ ಎಸ್ ಐ ಕು. ಸರಸ್ವತಿ, ಹಾಗೂ ಠಾಣಾ ಎ ಎಸ್ ಐ ಅಧಿಕಾರಿಗಳು,ಠಾಣಾ ಸಿಬ್ಬಂದಿಗಳು ಭಾಗವಹಿಸಿದ್ದರು.