ಜಾಲ್ಸೂರು: ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯ ಸಂಭ್ರಮ

0

ಜಾಲ್ಸೂರಿನ ಟೌನ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆ.15ರಂದು ಆಚರಿಸಲಾಯಿತು. ಮಸೀದಿಯ ಪ್ರಧಾನ ಕಾರ್ಯದರ್ಶಿ ಸಿ.ಪಿ. ಅಬ್ದುಲ್ ರಜಾಕ್ ಅವರು ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು. ಜಾಲ್ಸೂರು ಟೌನ್ ಮಸೀದಿ ಇಮಾಮ್ ಜುನೈದ್ ಹಿಮಮಿ ಸಖಾಫಿ ಅವರು ಸಂದೇಶ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಸ್ವಾದಿಕ್ ಫಾಳಿಲಿ , ಸಿ.ಹೆಚ್. ಅಬ್ದುಲ್ ಖಾದರ್ ಹಾಜಿ , ಅಬುಲ್ಲ ಹಾಜಿ , ವಿದ್ಯಾರ್ಥಿಗಳು ಹಾಗು ಊರವರು ಉಪಸ್ಥಿತರಿದ್ದರು.