ಸುಬ್ರಹ್ಮಣ್ಯದ ಎಸ್ . ಎಸ್ .ಪಿಯು ಕಾಲೇಜಿನಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ

0

ಸುಬ್ರಹ್ಮಣ್ಯದ ಎಸ್ ಎಸ್ ಪಿಯು ಕಾಲೇಜಿನಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯಂದು ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಗುರು ಕೆ.ಯಶವಂತ ರೈ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಗ್ರಾ.ಪಂ ಉಪಾಧ್ಯಕ್ಷ ವೆಂಕಟೇಶ ಎಚ್‌.ಎಲ್, ಪ್ರಾಥಮಿಕ ಶಾಲಾ ಮುಖ್ಯಗುರು ಮಧವ ಮೂಕಮಲೆ, ರೋಟರಿ ಅಧ್ಯಕ್ಷ ಚಂದ್ರಶೇಖರ ನಾಯರ್, ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ, ಪ್ರೆಸ್ ಕ್ಲಬ್ ಜತೆ ಕಾರ್ಯದರ್ಶಿ ಸಂತೋಷ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಪುಟಾಣಿಗಳು, ಶಿಕ್ಷಕರು, ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ಪ್ರೌಢಶಾಲಾ ವಿದ್ಯಾರ್ಥಿಗಳು , ಶಿಕ್ಷಕರು ಉಪಸ್ಥಿತರಿದ್ದರು.

ಆಕರ್ಷಕ ನೃತ್ಯೋತ್ಸವ:
ಈ ಸಂದರ್ಭ ಕಾಲೇಜಿನ ಎನ್.ಎಸ್.ಎಸ್, ರೆಡ್ ಕ್ರಾಸ್ ಮತ್ತು ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸುಮಾರು 300 ವಿದ್ಯಾರ್ಥಿಗಳು ದೇಶಭಕ್ತಿ ಸಾರುವ ನೃತ್ಯಗಳನ್ನು ವಿಶಾಲ ಪ್ರಾಂಗಣದಲ್ಲಿ ಆಕರ್ಷಕರಾಗಿ ಪ್ರದರ್ಶಿಸಿದರು