ರೋಟರಿ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0


ಸುಳ್ಯ ರೋಟರಿ ವಿದ್ಯಾ ಸಂಸ್ಥೆಯಲ್ಲಿ 78 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷೆ ರೊ.ಯೋಗಿತಾ ಗೋಪಿನಾಥ್ ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವವನ್ನು ತಿಳಿಸಿ ಭಾರತೀಯರಾಗಿ ತಮ್ಮ ಜವಾಬ್ದಾರಿಯ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಸಂಸ್ಥೆಯ ಸಂಚಾಲಕರಾದ ರೊ.PP.PHF ಪ್ರಭಾಕರನ್ ನಾಯರ್ ಬ್ರಿಟಿಷರ ಕ್ರೂರತೆಗೆ ಬಲಿಯಾದ ದೇಶಪ್ರೇಮಿ ಗಳನ್ನು ಸ್ಮರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಸ್ಥಾಪಕಾಧ್ಯಕ್ಷರು, ಪೂರ್ವ ಸಂಚಾಲಕರು, ಪೂರ್ವಾ ಧ್ಯಕ್ಷರು, ರೋಟರಿ ಕ್ಲಬ್ ಸದಸ್ಯರು, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ‌ ಶ್ರೀಮತಿ ಚಿಂತನಾ ಸುಬ್ರಹ್ಮಣ್ಯ ಮತ್ತು ಸದಸ್ಯರು,ರೋಟರಿ ಸಿಟಿ ಅಧ್ಯಕ್ಷ ಶಿವಪ್ರಸಾದ್ ಕೆ.ವಿ ಮತ್ತು ಸದಸ್ಯರು, ರೋಟರಿ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರು ,ಪದವಿಪೂರ್ವ ಪ್ರಾಂಶುಪಾಲೆ ಶೋಭಾ ಬೊಮ್ಮೆಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಶೇಡಿಕಜೆ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೋಹಿಣಿ ಅಂಬೆ ಕಲ್ಲು ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಗಾಯನ ಮಾಡಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. ಕು.ವಿಶ್ಮಿತಾ ವ್ಯಸನ ಮುಕ್ತ ಭಾರತ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ ನಾಯಕ ಕ್ಷಿತೀಶ ರಾಮ ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು. ಕು ಶೈಮಾ.S.M ಸ್ವಾಗತಿಸಿ, ಬಾನವಿ ಕೊಯ್ಂಗಾಜೆ ವಂದಿಸಿದರು.ನಂತರ ಪೇಪರ್ ಕ್ರಾಫ್ಟ್ ಪ್ರದರ್ಶನ ನಡೆಯಿತು.