ಕಾಂತಮಂಗಲ ಸ್ವಾತಂತ್ರ್ಯ ದಿನಾಚರಣೆ

0

ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೋತ್ಸವ ಸಂಭ್ರಮ ನಡೆಯಿತು.

ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಮೀರಾ.ಟಿ ಇವರು ಧ್ವಜಾರೋಹಣ ನೆರವೇರಿಸಿದರು. ನಂತರ ಶಾಲೆಯಿಂದ ಬ್ಯಾಂಡ್ ಸೆಟ್ ಮೂಲಕ ಮೆರವಣಿಗೆ ಸಾಗಿ ಕಾಂತಮಂಗಲದ ವಠಾರದಲ್ಲಿ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದರು.


ಸಭಾಕರ್ಯಕ್ರಮ:ಶಾಲಾ ಆವರಣದಲ್ಲಿ ಸಭಾ ಕರ್ಯಕ್ರಮ ನಡೆಯಿತು. ಈ ಸಭೆಯಲ್ಲಿ ಎಸ್. ಡಿ.ಎಂ.ಸಿ ಅಧ್ಯಕ್ಷರು ಮೀರಾ.ಟಿ. ಉಪಾಧ್ಯಕ್ಷರು ಜಗದೀಶ್ ದೊಡ್ಡೇರಿ.

ಗ್ರಾಮ ಪಂಚಾಯತ್ ಅಜ್ಜಾವರ ಇದರ ಸದಸ್ಯರು ಸರೋಜಿನಿ.ಅಂಗನವಾಡಿ ಶಿಕ್ಷಕಿ ಲಲಿತಾ. ಮುಖ್ಯೋಪಾದ್ಯಾ ಯರಾದ ಸ್ವರ್ಣಲತಾ.ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಾಗೆಯೇ ಸ್ವಾತಂತ್ರೋತ್ಸವ ಸಂಭ್ರಮಕ್ಕೆ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಈ ಸ್ಪರ್ಧೆಗೆ ಬಹುಮಾನವನ್ನು ನೀಡಿ ಮೀರಾ ಬಾಲಕೃಷ್ಣ ಇವರು ಸ್ವತಃ ವಿತರಿಸಿದರು.ಹಾಗೂ ಸತ್ಯಾಸಯಿ ಸೇವಾ ಸಂಸ್ಥೆ ಚೊಕ್ಕಾಡಿ ಇವರು ಕೂಡ ಸ್ಪರ್ಧೆ ಏರ್ಪಡಿಸಿ ಬಹುಮಾನವನ್ನು ನೀಡಿ ಸಹಕರಿಸಿದರು. ಹಾಗೂ ಎಸ್. ಡಿ.ಎಂ.ಸಿ ಹಾಗೂ ಪೋಷಕರು ಮತ್ತು ಹಳೇ ವಿದ್ಯಾರ್ಥಿಗಳು ಮತ್ತು ಊರವರು ಭಾಗವಹಿಸಿದರು.ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಆಶಾ ಇವರು ನಿರೂಪಣೆಯನ್ನು ನೆರವೇರಿಸಿದರು. ಸಹ ಶಿಕ್ಷಕಿಯರು ಭಾಗವಹಿಸಿ ಸಹಕರಿಸಿದರು.