ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

0

ಎಡಮಂಗಲ ಗ್ರಾಮದ ಮುರುಳ್ಯ ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಇಂದು ನಡೆಯಿತು.
ಬೆಳಿಗ್ಗೆ ಪ್ರಾರ್ಥನೆ, ಪೂಜಾ ಆರಂಭವಾಗಿ, ಮಧ್ಯಾಹ್ನ ಧಾರ್ಮಿಕ ಸಭೆ, ಸನ್ಮಾನ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

ವ್ಯವಸ್ಥಾಪನ ಸಮಿತಿಯವರು, ಸೇವಾ ಸಮಿತಿಯವರು, ಮಹಿಳಾ ಸೇವಾ ಸಮಿತಿಯವರು, ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿಯವರು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದು, ದೇವರ ಪ್ರಸಾದ ಸ್ವೀಕರಿಸಿದರು.