ಚೊಕ್ಕಾಡಿ: ಅಜ್ಜನಗದ್ದೆ ಸರಕಾರಿ ಶಾಲಾ ಮಕ್ಕಳಿಗೆ ನೇಜಿ ನೆಡುವ ಪ್ರಾತ್ಯಕ್ಷಿಕೆ

0

ಚೊಕ್ಕಾಡಿ ಗರುಡ ಯುವಕ ಮಂಡಲ, ಮಯೂರಿ ಯುವತಿ ಮಂಡಲದ ಆಶ್ರಯದಲ್ಲಿ ಅಜ್ಜನಗದ್ದೆ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪ್ರಾತ್ಯಕ್ಷಿಕೆಯೊಂದಿಗೆ ನೇಜಿ ನೆಡುವ ಕಾರ್ಯಕ್ರಮವು ಆ.18 ರಂದು ನಡೆಯಿತು.

ಅಜ್ಜನಗದ್ದೆ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು,ಮುಖ್ಯೋಪಾಧ್ಯಾಯರಾದ ಶ್ರೀಮತಿ ರೂಪವಾಣಿ, ಗರುಡ ಯುವಕ ಮಂಡಲದ ಅಧ್ಯಕ್ಷ ಯತಿನ್ ಕೊಳಂಬೆ, ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಕು. ಸ್ವಾತಿ ಪದವು ಹಾಗೂ ಪೋಷಕರು, ಗುರುಡ ಯುವಕ ಮಂಡಲದ ಸದಸ್ಯರು, ಮಯೂರಿ ಯುವತಿ ಮಂಡಲದ ಸದಸ್ಯರು ಸ್ಥಳೀಯರು ಭಾಗವಹಿಸಿದರು. ಗುರುಡ ಯುವಕ ಮಂಡಲದ ಗೌರವಧ್ಯಕ್ಷ ಮನೋಜ್ ಪಡ್ಪು ವಂದಿಸಿದರು. ಗದ್ದೆಯ ಮಾಲಕ ಯತೀಶ್ ಪೂಮಲೆ ಉಪಹಾರದ ವ್ಯವಸ್ಥೆ ಮಾಡಿದರು.