ಸುಳ್ಯದ ಜಾಗೃತಿ ತಂಡದಿಂದ ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ಕಾರ್ಯಗಾರ

0

ಜಾಗೃತಿ ಸುಳ್ಯ ವಿದ್ಯಾರ್ಥಿ ತಂಡದ ಸದಸ್ಯರು ವಿವಿಧ ರೀತಿಯ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸಲು ಮಾಹಿತಿ ಕಾರ್ಯಗಾರವು ಐವರ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಆ.18ರಂದು ನಡೆಯಿತು.

ಸೈಬರ್ ಕ್ರೈಮ್ ವಿಷಯದ ಕುರಿತು ಶ್ರಾವಣ್ ಶೇಡಿಕಜೆ, ಅಮರ್ ಕೆ.ಪಿ. ಮತ್ತು ಭುವನಶ್ರೀ ಅವರು ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಜಾಗೃತಿ ತಂಡದ ಸದಸ್ಯೆ ಗಗನ ಎಂ.ಆರ್. ಅವರು ತಂಡದ ಚಟುವಟಿಕೆಗಳು ಹಾಗೂ ರೂಪುರೇಷೆಯ ಬಗ್ಗೆ ಮಾಹಿತಿ ನೀಡಿದರು‌. ಐವರ್ನಾಡು ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ನಾರಾಯಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಮಾಜಿಕ ಜವಾಬ್ದಾರಿಯ ಉದ್ದೇಶದಿಂದ ಜಾಗೃತಿ ಸುಳ್ಯದ ವಿದ್ಯಾರ್ಥಿಗಳ ತಂಡ ಕಳೆದೊಂದು ವರ್ಷದಿಂದ ಸುಳ್ಯ ತಾಲೂಕಿನ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿಯನ್ನು ಬಿತ್ತಿ ಜಾಗೃತಿ ಮತ್ತು ಅರಿವು ಮೂಡಿಸಲು ಪ್ರಯತ್ನಿಸುತ್ತಿದೆ.