ಚೆಸ್ ಸ್ಪರ್ಧೆ : ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

0

ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಎಸ್.ಡಿ.ಎಂ ವಿದ್ಯಾಸಂಸ್ಥೆ ಬೆಳ್ತಂಗಡಿಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮೋoಟಡ್ಕ ಶಶಿಧರ ಎಂ.ಜೆ ಮತ್ತು ರೇಷ್ಮಾ ಕೆ. ಎಸ್ ದಂಪತಿಗಳ ಪುತ್ರಿ ಅವನಿ ಎಂ. ಎಸ್ 6ನೇ ತರಗತಿ ಪ್ರಥಮ ಸ್ಥಾನ, ಅಮರ ಮುಡ್ನೂರು ಗ್ರಾಮದ ಚಿಕ್ಕಿನಡ್ಕ ಪ್ರೇಮ್ ಪ್ರಕಾಶ್ ಡಿ’ಸೋಜಾ ಮತ್ತು ವೀಣಾ ಮೊಂತೆರೊ ದಂಪತಿಗಳ ಪುತ್ರ ಪ್ರೀತನ್ ವಿನ್ಸ್ ಡಿ’ಸೋಜಾ 7 ನೇ ತರಗತಿ ಚತುರ್ಥ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶಾಲಾ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ’ಸೋಜ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಪುಷ್ಪವೇಣಿ ಹುದೇರಿ, ಕೊರಗಪ್ಪ ಬೆಳ್ಳಾರೆ ಸಹಕರಿಸಿದರು.