ತೊಡಿಕಾನ ಶಾಲೆಗೆ ಮೈಕ್ರೋಫೋನ್ ಕೊಡುಗೆ

0


ತೊಡಿಕಾನ ಗ್ರಾಮದ ಬಾಳೆಕಜೆ ಸೀತಾರಾಮ ಗೌಡರವರ ಮನೆಯವರು ತೊಡಿಕಾನ ಹಿರಿಯ ಪ್ರಾಥಮಿಕ ಶಾಲೆಗೆ ಮೈಕ್ರೋಫೋನ್ ಹಾಗೂ ಮೈಕ್ ಸ್ಟಾಂಡ್ ನ್ನು ಕೊಡುಗೆಯಾಗಿ ನೀಡಿದರು.


ಬಾಳೆಕಜೆ ಸೀತಾರಾಮ ಗೌಡ ಹಾಗೂ ಅವರ ಮಗ ಗುತ್ತಿಗೆದಾರ ತಿಲಕ್ ರಾಜ್ ಕೊಡುಗೆಯನ್ನು ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಎಸ್. ಡಿ. ಎಂ. ಸಿ. ಅಧ್ಯಕ್ಷ ನವೀನ್ ಎ. ಬಿ, ಉಪಾಧ್ಯಕ್ಷೆ ಸೌಮ್ಯ ಭಟ್, ಸದಸ್ಯರು, ಶಾಲಾ ಪೋಷಕರು ಹಾಜರಿದ್ದರು. ಶಾಲಾ ವಿಜ್ಞಾನ ಪ್ರಯೋಗಾಲಯಕ್ಕೆ ಗಾಜಿನ ಕಪಾಟು ನೀಡಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಹಾಗೂ ಕೊಡುಗೆ ನೀಡಿದ ಬಾಳೆಕಜೆ ಸೀತಾರಾಮ ಗೌಡರನ್ನು ಶಾಲೆ ವತಿಯಿಂದ ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.