ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲಾ ರಜತ ಸಂಭ್ರಮ

0

ಕೆಥೋಲಿಕ್ ಶಿಕ್ಷಣ ಸಂಸ್ಥೆಗಳಿಂದ ಮೌಲ್ಯ ಬಿತ್ತುವ ಕಾರ್ಯ : ರೆ.ಫಾ. ಡಾ. ಪೀಟರ್ ಪೌಲ್ ಸಲ್ಡಾನ

ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆಗಳಾಗಿ ಬೆಳೆಯಬೇಕು : ಭಾಗೀರಥಿ ಮುರುಳ್ಯ

ಗುಣ ಮಟ್ಟದ ಶಿಕ್ಷಣದ ಜತೆಗೆ ಪ್ರೀತಿ, ಸಹ ಬಾಳ್ವೆಯಂತಹ ಮಾನವೀಯ ಮೌಲ್ಯಗಳನ್ನು ಬಿತ್ತುವ ಕಾರ್ಯವನ್ನು ಕೆಥೋಲಿಕ್ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಆ ಕಾರಣದಿಂದಲೇ ಪೋಷಕರ ಅಭಿಮಾನಕ್ಕೆ ಪಾತ್ರವಾಗಿ ಇಂತಹ ಶಿಕ್ಷಣ ಸಂಸ್ಥೆಗಳು ಬೆಳೆದು ಬೆಳಗುತ್ತಿದೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಹಾಗೂ ಮಂಗಳೂರು ಕೆಥೋಲಿಕ್ ಬೋರ್ಡ್ ಅಧ್ಯಕ್ಷ ರೆ.ಫಾ. ಡಾ. ಪೀಟರ್ ಪೌಲ್ ಸಲ್ಡಾನಾ ಹೇಳಿದರು.

ಸುಳ್ಯದ ಸಂತ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ರಜತ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಮಾತನಾಡಿ, ಗುಣ ಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆಗಳಾಗಿ ಬೆಳೆಯಬೇಕು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅವರನ್ನು ಬೆಳೆಸಬೇಕು ಎಂದರು.

ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ.. ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಸೈಂಟ್ ಜೋಸೆಫ್ ಎಜ್ಯುಕೇಶನಲ್ ಇನ್ ಸ್ಟಿಟ್ಯೂಷನ್ ಸ್ಥಾಪಕ ಫಾ. ಎಲ್ಯಾಸ್ ಡಿಸೋಜ , ಮಂಗಳೂರು ಸಿ.ಒ.ಡಿ.ಪಿ. ಕಾರ್ಯದರ್ಶಿ ಫಾ. ವಿನ್ಸೆಂಟ್ ಡಿಸೋಜ, ಬೆಂಗಳೂರು ಆರ್.ಎಫ್.ಟಿ.ಎಸ್. ಪ್ರೊವಿನ್ಶಲ್ ಸುಪೀರಿಯರ್ ರೆ. ಸಿಸ್ಟರ್ ಮೆರ್ಸಿ ಕುಟ್ಟಿ, ಕರೆಂಪುಡಿ ಸೈಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪ್ರಾಂಶುಪಾಲೆ ಸಿಸ್ಟರ್ ಬಿನೋಮಾ ಚಾಕೋ, ಸುಳ್ಯ ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರ ಕ್ರಾಸ್ತಾ, ಸೈಂಟ್ ಬ್ರಿಜಿಡ್ಸ್ ಚರ್ಚಿನ ಪ್ಯಾರಿಶ್ ಕೌನ್ಸಿಲ್ ಪೂರ್ವ ಉಪಾಧ್ಯಕ್ಷ ವಿಲಿಯಂ ಲಸ್ರಾದೋ, ಹಾಲಿ ಉಪಾಧ್ಯಕ್ಷ ನವೀನ್ ಮಚಾದೋ, ಕಾರ್ಯದರ್ಶಿ ಜೂಲಿಯನಾ ಕ್ರಾಸ್ತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶಾಲಾ ಸಂಚಾಲಕ ರೆ.ಫಾ. ವಿಕ್ಟರ್ ಡಿಸೋಜ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲ ವರದಿ ವಾಚಿಸಿದರು. ಶಿಕ್ಷಕಿ ಶ್ರೀಮತಿ ಯಶ್ವಿತಾ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಸ್ಮಿತಾ, ಶ್ರೀಮತಿ ಮಮತಾ ಕಾರ್ಯಕ್ರಮ ನಿರೂಪಿಸಿದರು.

ಸಿಲ್ವರ್ ಜ್ಯುಬಿಲಿ ಕನ್ವೀನರ್, ಪಿ.ಟಿ.ಎ. ಉಪಾಧ್ಯಕ್ಷ ಹೇಮನಾಥ್ ಬಿ., ಸಿಲ್ವರ್ ಜ್ಯುಬಿಲಿ ಪ್ರಧಾನ ಕಾರ್ಯದರ್ಶಿ ಡಾ. ಅನುರಾಧಾ ಕುರುಂಜಿ, ಪ್ರಾಥಮಿಕ ಶಾಲಾ ವಿಭಾಗದ ಪಿ.ಟಿ.ಎ. ಉಪಾಧ್ಯಕ್ಷ ಶಶಿಧರ್ ಎಂ.ಜೆ. ಪೂರ್ವ ಪ್ರಾಥಮಿಕ ವಿಭಾಗದ ಪಿ.ಟಿ.ಎ. ಉಪಾಧ್ಯಕ್ಷ ಪ್ರಭೋದ್ ಶೆಟ್ಟಿ, ಫ್ರೌಢಾ ಶಾಲಾ ವಿದ್ಯಾರ್ಥಿ ನಾಯಕ ಹಿಮಾಂಶು ಬಿ.ಸಿ., ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿ ನಾಯಕ‌ ಲಕ್ಷ್ಯಜಿತ್ ಜಿ.ರೈ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಹುಲ್ ಜಿ. ದಾಸ್, ಕಾರ್ಯದರ್ಶಿ ಕಾರ್ಯದರ್ಶಿ ಆದರ್ಶ ಎಸ್.ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಧಕ ವಿದ್ಯಾರ್ಥಿಗಳನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳ ಸಹಿತ ಹಲವು ಅಭಿನಂದನೆ ಹಾಗೂ ಸನ್ಮಾನ ಕಾರ್ಯಗಳು ನಡೆಯಿತು. ರಜತ ಸಂಭ್ರಮದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.