ಪಂಜ ಗ್ರಾಮ ಪಂಚಾಯತ್ 2024-25 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಆ.20 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಕರಿಕ್ಕಳ ಪಂಜ ರಸ್ತೆಯ ಬದಿ ಮರ ಮತ್ತು ಬರೆ ತೆರೆವು ಗೊಳಿಸಿ,ಕೃಷಿ ಪಂಪ್ ಸೆಟ್ ಎನ್ ಒ ಸಿ, ಪಂಜದಲ್ಲಿ
ಕೆ ಪಿ ಎಸ್ ಸ್ಕೂಲ್ ಬೇಡಿಕೆ, ಮೊರಾರ್ಜಿ ವಸತಿ ಶಾಲೆಗೆ ಕಾಂಪೌಂಡ್ ಬಹಳ ಅಗತ್ಯ,ಮಾಹಿತಿ ಹಕ್ಕು ನಲ್ಲಿ ಕೇಳಿದ ಪ್ರಶ್ನೆ ಕುರಿತು, ನಿವೇಶನ ಹಂಚಿಕೆ, ಕಾಡು ಪ್ರಾಣಿಗಳ ಹಾವಳಿ, ಕೃಷಿ ಪಂಪ್ ಸೆಟ್ ಗೆ ಎನ್ ಒ ವಿತರಣೆ ಕುರಿತು,ಕೃಷಿ ಪಂಪ್ ಸೆಟ್ ಗಳಿಗೆ ಕಡ್ಡಾಯ ಆಧಾರ್ ಜೋಡಿಸ ಬೇಕು, ಬೈಪಾಸ್ ರಸ್ತೆ ಅಭಿವೃದ್ಧಿ ಕುರಿತು, ಕರಿಕ್ಕಳ ಶಾಲೆ ವ್ಯವಸ್ಥೆ ಕುರಿತು, ಪ್ಲಾಸ್ಟಿಕ್ ಮುಕ್ತ ಗ್ರಾಮ ಆಗ ಬೇಕು, ಬೆಳೆ ಸಮೀಕ್ಷೆಯ ಲೋಪಗಳ ಬಗ್ಗೆ, ಸರ್ಕಾರಿ ಆಸ್ಪತ್ರೆಯ ತಡೆ ಗೋಡೆ ಜರಿದಿರುವ ಕುರಿತು, ಚರಂಡಿಗಳ ದುರಸ್ಥಿ, ರಸ್ತೆಗೆ ನೀರು ಹಾಗೂ ಮಣ್ಣು ಬಿಡುವವರಿಗೆ ನೋಟೀಸ್ ಮೊದಲಾದ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆಯಿತು.
ನೋಡೆಲ್ ಅಧಿಕಾರಿಯಾಗಿ ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಪಾಲ್ಗೊಂಡಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಸಭಾಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಯು ಬಿ, ಕಾರ್ಯದರ್ಶಿ ಸೀತಾರಾಮ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ ಸದಸ್ಯರಾದ ಶ್ರೀಮತಿ ಪೂರ್ಣಿಮಾ ದೇರಾಜೆ, ಶ್ರೀಮತಿ ನೇತ್ರಾವತಿ ಕಲ್ಲಾಜೆ, ಶ್ರೀಮತಿ ವೀಣಾ, ಲಕ್ಷ್ಮಣ ಗೌಡ ಬೊಳ್ಳಾಜೆ, ಶ್ರೀಮತಿ ದಿವ್ಯಾ ಪುಂಡಿಮನೆ , ಜಗದೀಶ್ ಪುರಿಯ, ಶ್ರೀಮತಿ ಪ್ರಮೀಳ ಸಂಪ, ಶ್ರೀಮತಿ ಮಲ್ಲಿಕಾ ಅಳ್ಪೆ,ಚಂದ್ರಶೇಖರ ದೇರಾಜೆ, ಶರತ್ ಕುದ್ವ, ಲಿಖಿತ್ ಪಲ್ಲೋಡಿ ವಿವಿಧ ಇಲಾಖೆಗಳ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಯು ಬಿ ಸ್ವಾಗತಿಸಿದರು ಮತ್ತು ವಂದಿಸಿದರು. ಸಿಬ್ಬಂದಿ ಬಾಬು ವರದಿ ವಾಚಿಸಿದರು.