ಸುಳ್ಯದಲ್ಲಿ ರೋಟರಿ ಸಮುದಾಯದಳಗಳ ಜಿಲ್ಲಾ ಅಧಿವೇಶನ 2024

0

ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181 ಇದರ ರೋಟರಿ ಸಮುದಾಯ ದಳಗಳ ಜಿಲ್ಲಾ ಅಧಿವೇಶನ 2024 ರೋಟರಿ ಕ್ಲಬ್ ಸುಳ್ಯ ಹಾಗೂ ರೋಟರಿ ಸಮುದಾಯದಳ ಅರಂಬೂರು ಇದರ ಪ್ರಾಯೋಜಕತ್ವದಲ್ಲಿ ತಾರೀಕು 18.08.2024 ರಂದು ರೋಟರಿ ಸಮುದಾಯ ಭವನ ಸುಳ್ಯದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ರೊ.ವಿಕ್ರಂ ದತ್ತ, ಡಿಸ್ಟ್ರಿಕ್ಟ್ ಗವರ್ನರ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊ.ಯೋಗಿತ ಗೋಪಿನಾಥ್ ಅಧ್ಯಕ್ಷರು ರೋಟರಿ ಕ್ಲಬ್ ಸುಳ್ಯ, ಅತಿಥಿಗಳಾಗಿ ರೊ. ವೆಂಕಟಾಚಲ ಡಿ. ಜಿಲ್ಲಾ ಸಭಾಪತಿ ಆರ್‌.ಸಿ.ಸಿ, ರೊ. ವಿನಯ್ ಕುಮಾರ್ ಸಹಾಯಕ ಗವರ್ನರ್ ವಲಯ-5, ರೊ. ಹರೀಶ್ ಶೆಟ್ಟಿ ಕೊಲ್ಯ ಜಿಲ್ಲಾ ಆರ್.ಸಿ.ಸಿ ಪ್ರತಿನಿಧಿ, ರೊ. ಪ್ರಭಾಕರನ್ ನಾಯರ್ ವಲಯ ಸೇನಾನಿ ವಲಯ-5, ಉಪಸ್ಥಿತರಿದ್ದರು.

ಜಿಲ್ಲಾ ಅಧಿವೇಶನ ಸಂಚಾಲಕರಾದ ರೊ.ಆನಂದ ಖಂಡಿಗ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಹಿತಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ರೊ.ಪುರಂದರ ರೈ, ಡಿಜಿಎನ್ ರೊ.ಸತೀಶ್ ಬೋಳಾರ್ ಹಾಗೂ ರೊ.ಪಿಡಿಜಿ ಸುರೇಶ್ ಚೆಂಗಪ್ಪ ರವರು ಭಾಗವಹಿಸಿದ್ದರು. ಕಾರ್ಡಿಯೋ ಪಲ್ ಮನರಿ ಪುನಶ್ಚೇತನದ(CPR) ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶನವನ್ನು ಡಾ. ರಾಮಚಂದ್ರ ಭಟ್ ಸಿ. ಹಾಗೂ ಡಾ.ಭರತ್ ಶೆಟ್ಟಿ ಅವರ ತಂಡ ನೀಡಿದರು. ಆರ್.ಸಿ. ಸಿ ಸಮ್ಮೇಳನ ಉಪ ಸಭಾಪತಿ ರೊ.ಡಾ.ರಾಮ್ ಮೋಹನ್ ವಂದನಾರ್ಪಣೆ ಮಾಡಿದರು.


ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಪ್ರೇಮಲತಾ, ಅಧ್ಯಕ್ಷರು, ಆರ್.ಸಿ.ಸಿ. ಅರಂಬೂರು ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿಡಿಜಿ ರೊ.ಸುರೇಶ್ ಚೆಂಗಪ್ಪ, ರೊ.ಜೈ ಕುಮಾರ್ ಕೊಲ್ಯ, ಉಪ ಸಭಾಪತಿ ಆರ್ .ಸಿ.ಸಿ., ರೊ. ಹರೀಶ್ ಶೆಟ್ಟಿ ಕೊಲ್ಯ, ಆರ್.ಸಿ.ಸಿ ಜಿಲ್ಲಾ ಪ್ರತಿನಿಧಿ, ಆನಂದ ಖಂಡಿಗ, ಜಿಲ್ಲಾ ಅಧಿವೇಶನ ಸಂಚಾಲಕರು, ರೊ.ಯೋಗಿತ ಗೋಪಿನಾಥ್, ಅಧ್ಯಕ್ಷರು ರೋಟರಿ ಕ್ಲಬ್ಸ್ ಸುಳ್ಯ, ರೊ.ಪ್ರಭಾಕರನ್ ಸಿ.ಎಚ್. ಆರ್. ಸಿ.ಸಿ ಚೇರ್ಮನ್ ರೋಟರಿ ಕ್ಲಬ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಅಧಿವೇಶನದಲ್ಲಿ ಭಾಗವಹಿಸಿದ್ದ ಆರ್.ಸಿ.ಸಿ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಆರ್.ಸಿ.ಸಿ. ಅರಂಬೂರು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಂದನಾರ್ಪಣೆಯನ್ನು ರೊ.ಡಾ.ಹರ್ಷಿತಾ ಪುರುಷೋತ್ತಮ್ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಕ್ಲಬ್ ನ ಕಾರ್ಯದರ್ಶಿ ರೊ.ಡಾ.ಹರ್ಷಿತಾ ಪುರುಷೋತ್ತಮ್ ಮತ್ತು ಡಾ.ರಾಮೋಹನ್ ನೆರವೇರಿಸಿದರು.