ರಾಜ್ಯ ಅಪೆಕ್ಷ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾಗಿ ವಸಂತಕುಮಾರ್ ಪೋನಡ್ಕ

0

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಬೆಂಗಳೂರು, ಇದರ ಮುಖ್ಯ ಪ್ರಧಾನ ವ್ಯವಸ್ಥಾಪಕರು (ಹಣಕಾಸು, ಲೆಕ್ಕ ಪರಿಶೋಧನೆ ವಿಭಾಗ) ಹುದ್ದೆಗೆ ಸುಳ್ಯ ತಾಲೂಕಿನ ಚೊಕ್ಕಾಡಿಯ ವಸಂತಕುಮಾರ್ ಪೋನಡ್ಕ ಇವರು ಪದೋನ್ನತಿ ಹೊಂದಿ ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ.

ಪೋನಡ್ಕ ದಿ. ಪರಮೇಶ್ವರಯ್ಯ ಮತ್ತು ದಿ. ಸಾವಿತ್ರಿ ದಂಪತಿಯ ಪುತ್ರರಾಗಿರುವ ಇವರು ದ.ಕ. ಜಿಲ್ಲೆಯಿಂದ ರಾಜ್ಯದ ಪ್ರತಿಷ್ಠಿತ ಅಪೆಕ್ಸ್ ಬ್ಯಾಂಕಿನ ಸಿ.ಜಿ.ಎಂ. ಹುದ್ದೆಗೇರಿದ ಪ್ರಥಮ ವ್ಯಕ್ತಿಯಾಗಿರುತ್ತಾರೆ.