ಮರ್ಕಂಜ ಗ್ರಾಮ ಪಂಚಾಯತ್ ಗೆ ಪ್ರಭಾರ ಪಿ.ಡಿ.ಓ. ಆಗಿ ಕೀರ್ತಿಪ್ರಸಾದ್ ಅಧಿಕಾರ ಸ್ವೀಕಾರ

0

ಮರ್ಕಂಜ ಗ್ರಾಮ ಪಂಚಾಯತ್ ಗೆ ಕೀರ್ತಿಪ್ರಸಾದ್ ರವರು ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಇಂದು ಅಧಿಕಾರ ವಹಿಸಿಕೊಂಡರು. ಇಲ್ಲಿ ಈ ಹಿಂದೆ ಪ್ರಭಾರ ಪಿಡಿಒ ಆಗಿದ್ದ ವಿದ್ಯಾಧರರವವರು ಮುಡ್ನೂರು ನೆಟ್ಟಣಕ್ಕೆ ವರ್ಗಾವಣೆಯಾಗಿ, ಕೀರ್ತಿಪ್ರಸಾದ್ ರವರಿಗೆ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೊಳಿಕೆ, ಉಪಾಧ್ಯಕ್ಷೆ ಸಂಧ್ಯಾ ಪಾರೆಮಜಲು ಸೇವಾಜೆ ಹಾಗೂ ಸದಸ್ಯರಾದ ರಮತಾ ಕುದ್ಕುಳಿ, ಗೋವಿಂದ ಅಳವುಪಾರೆ, ಯಶವಂತ ಸೂಟೆಗದ್ದೆ ಹಾಗೂ ಪಂಚಾಯತ್ ಕಾರ್ಯದರ್ಶಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.