ನಾಗಪಟ್ಟಣ ಸದಾಶಿವ ದೇವಸ್ಥಾನದಲ್ಲಿ ನೂತನ ವ್ಯವಸ್ಥಾಪನಾ ಸಮಿತಿಯ ಸಭೆ

0

ಅಧ್ಯಕ್ಷರಾಗಿ ಬಾಬು ಗೌಡ ಬಿ. ಕಡೆಂಗ ಆಯ್ಕೆ

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ರಚನೆಯು ಜಿಲ್ಲಾ ಧಾರ್ಮಿಕ ಪರಿಷತ್ ನ ನಿರ್ಣಯದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ರ ವಿಧಿ 25 ರನ್ವಯ ಆದೇಶದಂತೆ ಮುಂದಿನ 3 ವರ್ಷಗಳ ಅವಧಿಗೆ ನೂತನ ಸಮಿತಿ ರಚನೆಗೊಂಡಿದ್ದು ಡಿ. 17 ರಂದು ಪ್ರಥಮ ಸಭೆಯು ಆಡಳಿತಾಧಿಕಾರಿ ರವರ ಸಮಕ್ಷಮದಲ್ಲಿ ನಡೆಯಿತು.

ಮುಂದಿನ ಅವಧಿಗೆ ನೂತನ
ಅಧ್ಯಕ್ಷರಾಗಿ ಬಾಬು ಗೌಡ ಬಿ. ಕಡೆಂಗ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಮಿತಿಯ ಸದಸ್ಯರಾಗಿಅರ್ಚಕ ರಾಜೇಂದ್ರ ಪ್ರಸಾದ್ ಮೂಡತ್ತಾಯ, ದಿನೇಶ್ ಕೋಲ್ಚಾರು, ರಾಧಾಕೃಷ್ಣ ಕೋಲ್ಚಾರು,ಪ್ರಸಾದ್ ಕುಮಾರ್
ನಾಗಪಟ್ಟಣ,ಶ್ರೀಮತಿ ಜಯಲಕ್ಷ್ಮಿ ನಾರ್ಕೋಡು, ಶ್ರೀಮತಿ ಮಾಲಾ ನಾಗಪಟ್ಟಣ, ಆನಂದ ಕುಮಾರ್ ನಾಗಪಟ್ಟಣ, ದಯಾನಂದ ಪಿ. ಎನ್ ಪಾತಿಕಲ್ಲು ಇವರುಗಳು ಆಯ್ಕೆಯಾದರು.


ಈ ಸಂದರ್ಭದಲ್ಲಿ ಆಡಳಿತಾಧಿಕಾರಿ
ಸೃಜನ್ ಎ. ಜಿ,
ಸ್ಥಳೀಯಪ್ರಮುಖರಾದ ಸತ್ಯಕುಮಾರ್ ಆಡಿಂಜ, ಭಜನಾ ಸಂಘದ ಅಧ್ಯಕ್ಷ ಹೂವಾನಂದ ಬಾರ್ಪಣೆ, ಉಲ್ಲಾಸ್ ಕುದ್ಕುಳಿ, ಸಿಬ್ಬಂದಿ ಶರತ್ ಗುಡ್ಡೆಮನೆ ಉಪಸ್ಥಿತರಿದ್ದರು.