ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 111ನೇ ಮಹಾಸಭೆ

0

🔸494.51 ಕೋಟಿ ರೂ.ವ್ಯವಹಾರ

1.81 ಕೋಟಿ ರೂ.ನಿವ್ವಳ ಲಾಭ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 111ನೇ ವಾರ್ಷಿಕ ಮಹಾ ಸಭೆಯು ಆ.24 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಗಣೇಶ್ ಪೈ ಬಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘವು 2023-24 ನೇ ಸಾಲಿನಲ್ಲಿ 4936 ಸದಸ್ಯರನ್ನು ಹೊಂದಿದೆ. 8.56 ಕೋಟಿ ರೂ. ಪಾಲು ಬಂಡವಾಳ ಸಂಗ್ರಹಿಸಿ, 50.82 ಕೋಟಿ ರೂ. ಠೇವಣಿ ಹೊಂದಿರುತ್ತದೆ. ರೂ 42.71 ಕೋಟಿ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಸಾಲ ಪಡೆದು ರೂ.83.42 ಕೋಟಿ ಸಾಲವನ್ನು ವಿವಿಧ ಉದ್ದೇಶಗಳಿಗೆ ವಿತರಿಸಿದ್ದು, ವಿತರಿಸಿದ ಸಾಲಗಳ ಪೈಕಿ ಶೇ. 97.87 ವಸೂಲಾಗಿರುತ್ತದೆ.ರೂ. 494. 51 ಕೋಟಿ ಒಟ್ಟು ವಾರ್ಷಿಕ ವ್ಯವಹಾರ ವನ್ನು ಮಾಡಲಾಗಿದೆ. ವರದಿ ಸಾಲಿನಲ್ಲಿ ಒಟ್ಟು ರೂ.1,81,91,531-೦೦ನಿವ್ವಳ ಲಾಭವನ್ನು ಗಳಿಸಿ , ಸದಸ್ಯರಿಗೆ 9 ಶೇ. ಡಿವಿಡೆಂಟ್ ವಿತರಿಸಲು ಶಿಫಾರಸ್ಸು ಮಾಡಿದೆ. ಎಂದು ಸಂಘದ ಅಧ್ಯಕ್ಷ ಗಣೇಶ್ ಪೈ ಬಿ ರವರು ವಿವರಿಸಿದರು.

ಪಿಯುಸಿ-ಎಸ್ ಎಸ್ ಎಲ್ ಸಿ ಸಾಧಕರಿಗೆ ಪ್ರೋತ್ಸಾಹ ಧನ: ಸಂಘದ ವಿದ್ಯಾನಿಧಿ ಯೋಜನೆಯಲ್ಲಿ ಪಂಜ ಸರಕಾರಿ ಪ್ರೌಢಶಾಲೆ, ಪಂಜ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ತಲಾ ಇಬ್ಬರನ್ನು ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಕೇನ್ಯ, ಕಣ್ಕಲ್ ಯತೀಶ ಕೆ ರವರ ಪುತ್ರಿ ಪಂಜ ಮೊರಾರ್ಜಿ ದೇಸಾಯಿ ಪ್ರೌಢ ಶಾಲಾ ವಿದ್ಯಾರ್ಥಿನಿ ಲಿಖಿತಾ ಕೆ, ಕೂತ್ಕುಂಜ, ಸುಂದರ ಗೌಡ ಸಿ ರವರ ಪುತ್ರ ಪಂಜ ಮೊರಾರ್ಜಿ ದೇಸಾಯಿ ಪ್ರೌಢ ಶಾಲಾ ವಿದ್ಯಾರ್ಥಿ ಮನ್ವಿತ್ ಸಿ , ಪಂಜದ ಕಂರ್ಬು ನೆಕ್ಕಿಲ ಕೆ ಎನ್ ಹೊನ್ನಪ್ಪ ಗೌಡರ ಪುತ್ರ ಪಂಜ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ಪ್ರಖ್ಯಾತ್ ಎಚ್ ಎನ್, ಕೇನ್ಯ, ಗೆಜ್ಜೆ ಜನಾರ್ಧನ ಗೌಡರ ಪುತ್ರಿ ಪಂಜ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ರಕ್ಷಿತಾ ಜೆ, ಪಂಜದ ಕೃಷ್ಣ ನಗರ ಕೇಶವ ಆಚಾರಿ ಪಿ ರವರ ಪುತ್ರ ಪಂಜ ಸರಕಾರಿ ಪ.ಪೂ. ಕಾಲೇಜು ವಿದ್ಯಾರ್ಥಿ ಚರಣ್ ಪಿ ಕೆ , ಪಂಜದ ಕರಿಮಜಲು ಬಾಲಕೃಷ್ಣ ಗೌಡರ ಪುತ್ರ ಪಂಜ ಪ.ಪೂ. ಕಾಲೇಜು ವಿದ್ಯಾರ್ಥಿ ಕೌಶಿಕ್ ಕೆ ,ಬಳ್ಪ ಬೋಗಾಯನಕೆರೆ ಪ್ರಸನ್ನ ಬಿ ರವರ ಪುತ್ರಿ ಪಂಜ ಪ.ಪೂ. ಕಾಲೇಜು ವಿದ್ಯಾರ್ಥಿನಿ ವಿನೀತ ಪಿ , ಪಂಜದ ಕಂಬಳ ನವೀನ್ ಚಂದ್ರ ಕೆ ರವರ ಪುತ್ರ ಪಂಜ ಪ.ಪೂ. ಕಾಲೇಜು ವಿದ್ಯಾರ್ಥಿ ಮಾತೇಶ್ ಕೆ ಎನ್ ರವರು ಪ್ರೋತ್ಸಾಹ ಧನ ,ಗೌರವ ಸ್ವೀಕರಿಸಿದರು.

ಅಧಿಕ ವ್ಯವಹಾರ ಮಾಡಿದ ಸದಸ್ಯರಿಗೆ ಗೌರವಾರ್ಪಣೆ:
2023- 24ನೇ ಸಾಲಿನಲ್ಲಿ ಅತ್ಯಧಿಕ ವ್ಯವಹಾರ ಮಾಡಿರುವ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು. ಸಂಘದ ಮೂಲಕ ಅತ್ಯಧಿಕ ಅಡಿಕೆ ಮಾರಾಟ ಕೇಶವ ಗೌಡ ಕುದ್ವ , ದಾಮೋದರ ಗೌಡ ಪಿ , ಅತ್ಯಧಿಕ ಕರಿಮೆಣಸು ಮಾರಾಟ ಕೃಷ್ಣಪ್ರಸಾದ್ ಕರ್ಮಾಜೆ, ಭಾಸ್ಕರ್ ರೈ ಪಡ್ಯೊಟ್ಟು, ಅತ್ಯಧಿಕ ಕೊಕ್ಕೋ ಮಾರಾಟ ಡಾ.ಲೀಲಾವತಿ, ಜನಾರ್ಧನ ಜತ್ತಿಲ, ಅತ್ಯಧಿಕ ರಬ್ಬರ್ ಮಾರಾಟ ಕೇಶವ ಗೌಡ ಕುದ್ವ, ಸತ್ಯದೀಪ್ ಎಂ ಆರ್, ಅತ್ಯಧಿಕ ಗೊಬ್ಬರ ಖರೀದಿ ಚಂದ್ರಶೇಖರ ಶಾಸ್ತ್ರಿ ಚಿರಶ್ಯಾಮಲ , ಕುಸುಮಾಧರ ಪುರಿಯ, ಅತ್ಯಧಿಕ ಪೈಪು ಮತ್ತು ಬಿಡಿ ಭಾಗ ಖರೀದಿ ಕೇಶವ ಕೆರೆಮೂಲೆ, ಮಾಧವ ಕೆರೆಮೂಲೆ, ಅತ್ಯಧಿಕ ಗ್ರಹ ಬಳಕೆ ಸಾಮಗ್ರಿ ಖರೀದಿ ಸುರೇಂದ್ರ ಎಣ್ಣೆಮಜಲು,ದಯಾನಂದ ಕಿನ್ನಿಕುಮೇರಿ, ಅತ್ಯುತ್ತಮ ಗ್ರಾಹಕರು ಶಿವರಾಮಯ್ಯ ಎಚ್ ಕರ್ಮಾಜೆ , ಶ್ರೀಮತಿ ಗಂಗಮ್ಮ ಬಿ ಎಂ ಗೌರವ ಸ್ವೀಕರಿಸಿದರು.

ಅತ್ಯುತ್ತಮ ನವೋದಯ ಸ್ವ-ಸಹಾಯ ಗುಂಪುಗಳಾಗಿ ಸ್ಪಂದನಾ ನವೋದಯ ಸ್ವ-ಸಹಾಯ ಸಂಘ ಐವತ್ತೊಕ್ಲು, ಶ್ರೀ ಕಟಿಲೇಶ್ವರಿ ಮಹಿಳಾ ನವೋದಯ ಸ್ವ-ಸಹಾಯ ಸಂಘ ಬಳ್ಪ, ಶ್ರೀರಕ್ಷಾ ಮಹಿಳಾ ನವೋದಯ ಸ್ವ-ಸಹಾಯ ಸಂಘ ಕೂತ್ಕುಂಜ, ದುರ್ಗಾಂಬ ನವೋದಯ ಸ್ವ-ಸಹಾಯ ಸಂಘ ಕೇನ್ಯ ಇವರು ಗೌರವ ಸ್ವೀಕರಿಸಿದರು.

ಸಾಲವನ್ನು ವಾಯಿದೆಗೆ ಸರಿಯಾಗಿ ಮರುಪಾವತಿಸಿದ ಎಲ್ಲಾ ಸದಸ್ಯರ ಪೈಕಿ ಸ್ಥಳದಲ್ಲಿ ಅದೃಷ್ಟ ಚೀಟಿ ತೆಗೆದು ಐವರನ್ನು ಗೌರವಿಸಲಾಯಿತು. ಬಿಶ್ವಜಿತ್ , ಕುಸುಮಾದರ ಪೂಜಾರಿಮನೆ , ಅಮಿತ ಕಾಪುಮೂಲೆ , ಗಿರೀಶ್ ಗೌಡ ಚೆನ್ನಕಜೆ, ಮೋಹನ್ ಅಗಳ್ತ ವಿಜೇತರು.

ಮಹಾಸಭೆಯಲ್ಲಿ ಹಾಜರಿದ್ದ ಅದೃಷ್ಟ ಶಾಲಿ ಸದಸ್ಯರನ್ನು ಲಕ್ಕಿ ಚೀಟಿ ತೆಗೆದು ಆಯ್ಕೆ ಮಾಡಿ ಸಂಘದ ಪೂರ್ವಾಧ್ಯಕ್ಷ ಆನಂದ ಗೌಡ ಕಂಬಳರವರ ಪ್ರಾಯೋಜಕತ್ವದಲ್ಲಿ ಸೀರೆ ನೀಡಲಾಯಿತು. ಪುಣ್ಣಣ್ಣ ಗೌಡ ಕುಂಜತ್ತಾಡಿ, ಕುಸುಮಾವತಿ ಎಣ್ಣೆಮಜಲು, ಲಿಂಗಪ್ಪ ಗೌಡ ಅಗೋಳಿಬೈಲ್,ಮಾಧವ ಹೆಬ್ಬಾರಹಿತ್ಲು, ವೇದಾವತಿ ಕೃಷ್ಣನಗರ, ಸುಂದರಿ ಕಾಳಮಜಲು ವಿಜೇತರು .
.
ಇದೇ ವೇಳೆ ಸಂಘದ ವತಿಯಿಂದ ಮರಣ ಸಾಂತ್ವನ ಧನ ಸಹಾಯ ಮತ್ತು ಅನಾರೋಗ್ಯದವರಿಗೆ ಚಿಕಿತ್ಸೆಗೆ ಧನ ಸಹಾಯ ನೀಡಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ
ರಘುನಾಥ ರೈ ಕೆರೆಕ್ಕೋಡಿ, ನಿರ್ದೇಶಕರಾದ ಚಂದ್ರಶೇಖರಶಾಸ್ತ್ರಿ ಸಿ, ಸುಬ್ರಹ್ಮಣ್ಯ ಕುಳ, ಲಿಗೋಧರ ಆಚಾರ್ಯ,ಶ್ರೀಕೃಷ್ಣಭಟ್ ಪಟೋಳಿ, ವಾಚಣ್ಣ ಕೆರೆಮೂಲೆ, ಚಿನ್ನಪ್ಪ ಗೌಡ ಚೊಟ್ಟೆಮಜಲು, ಕಿಟ್ಟಣ್ಣ ಪೂಜಾರಿ ಕಾಂಜಿ , ಶ್ರೀಮತಿ ಮೋಹಿನಿ ಬೊಳ್ಮಲೆ, ಶ್ರೀಮತಿ ಹೇಮಲತಾ ಚಿದ್ಗಲ್, ಮುದರ ಐವತ್ತೊಕ್ಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಉಪಸ್ಥಿತರಿದ್ದರು.

ಕ್ಯಾಂಪ್ಕೋ ಸಂಸ್ಥೆಯ ಗೊಬ್ಬರ ವಿಭಾಗದ ಕುರಿತು ಕ್ಯಾಂಪ್ಕೋ ಅಧಿಕಾರಿ ಕೃಷ್ಣ ಎನ್ ಆರ್ ಮಾಹಿತಿ ನೀಡಿದರು.
ಕ್ಯಾಂಪ್ಕೋ ಪಂಜ ಶಾಖೆಯ ಮುಖ್ಯಸ್ಥ ಅನಂತಕೃಷ್ಣ ರವರು ಕ್ಯಾಂಪ್ಕೋ ಸಂಸ್ಥೆಯ ಸೌಲಭ್ಯ ಕುರಿತು ಮಾಹಿತಿ ನೀಡಿದರು ಮತ್ತು ಮಾರುಕಟ್ಟೆಯ ವಿಚಾರದಲ್ಲಿ ಸದಸ್ಯರೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯ, ಮಾಜಿ ನಿರ್ದೇಶಕ ಸದಾನಂದ ಗೌಡ ಪಾದೆ ದೀಪ ಪ್ರಜ್ವಲನೆ ಗೊಳಿಸಿದರು. ಶ್ರೀಮತಿ ವಿದ್ಯಾ ಲಕ್ಷ್ಮೀ ಕೋಡಿಗದ್ದೆ ಪ್ರಾರ್ಥಿಸಿದರು.ಸಂಘದ ನಿರ್ದೇಶಕ ಸುಬ್ರಹ್ಮಣ್ಯ ಕುಳ ಸ್ವಾಗತಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ವಾರ್ಷಿಕ ವರದಿ
ವಾಚಿಸಿದರು.ಲೋಹಿತ್ ಎಣ್ಣೆಮಜಲು ನಿವ್ವಳ ಲಾಭ ವಿಂಗಡಣೆ ವಾಚಿಸಿದರು.ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು.ಸಂಘದ ಉಪಾಧ್ಯಕ್ಷ ರಘುನಾಥ ರೈ ಕೆರೆಕ್ಕೋಡಿ ವಂದಿಸಿದರು.