ಅಧ್ಯಕ್ಷರಾಗಿ ಶರತ್ ತೊಡಿಕಾನ, ಕಾರ್ಯದರ್ಶಿಯಾಗಿ ಸಿದ್ದೀಕ್ ಗೂನಡ್ಕ ಆಯ್ಕೆ
ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮತ್ತು ಮಾಲಕರ ಸಂಘ ಆಸ್ತಿತ್ವಕ್ಕೆ ಬಂದಿದೆ. ಸಮಿತಿ ರಚನಾ ಸಭೆ ಸುಳ್ಯದ ಉಡುಪಿ ಗಾರ್ಡನ್ ಸಭಾಭವನ ದಲ್ಲಿ ನಡೆಯಿತು.ಶಿವಪ್ರಸಾದ್ ಕೆ ಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಶರತ್ ತೊಡಿಕಾನ ಪ್ರಾಸ್ತಾವಿಕ ಮಾತನಾಡಿ ಸಂಘ ಮಾಡುವ ಉದ್ದೇಶ ಮತ್ತು ಅದರ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಬಳಿಕ ನೂತನ ಸಮಿತಿ ರಚಸಿ ಗೌರವ ಅಧ್ಯಕ್ಷರಾಗಿ ಶಿವ ಪ್ರಸಾದ್ ಕೆ ಜೆ,ಅಧ್ಯಕ್ಷರಾಗಿ ಶರತ್ ಎ ತೊಡಿಕಾನ, ಪ್ರ.ಕಾರ್ಯದರ್ಶಿಯಾಗಿ ಸಿದ್ದೀಕ್ ಗೂನಡ್ಕ, ಕೋಶಧಿಕಾರಿ ರಫೀಕ್ ಬಿ ಎಂ ಎ,ಉಪಾಧ್ಯಕ್ಷರಾಗಿ ಉನೈಸ್ ಪೆರಾಜೆ,ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಸುಬ್ರಹ್ಮಣ್ಯ,ಮೀಡಿಯಾ ಕಾರ್ಯದರ್ಶಿ ಯಾಗಿ ರಫೀಕ್ ಬಾಳೆಮಕ್ಕಿ ಇವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರುಗಳಾಗಿ ಕೇಶವ ಚಂದ್ರ ಬೆಳ್ಳಾರೆ,ಹಮೀದ್ ಬೆಳ್ಳಾರೆ,ಹನೀಫ್ ಕೆ ವಿ ಜಿ,ಆನಂದ ಬೆಳ್ಳಾರೆ (108),ರಾಜಶೇಖರ (108)ಸೀತಾರಾಮ(108) ಉದಯ ಪಂಜ ಪಂಚಶ್ರೀ,ಪ್ರಶಾಂತ್ ಜಯನಗರ (ಜ್ಯೋತಿ ಸೇವಾ ಭಾರತಿ),ಸಿದ್ದೀಕ್ ಜಟ್ಟಿ ಪಳ್ಳ,ಸಮೀರ್ ಕಾಣಿಯೂರು,ಪ್ರಶಾಂತ್ ಕೆ ವಿ ಜಿ,ವಿನಯ ಎ ಜೆ ಅರಂತೋಡು, ಫೈಝಲ್ ಸುಳ್ಯ ಎ ಐ ಕೆ ಎಂ ಸಿ ಸಿ,ಜಯಪ್ರಕಾಶ್ ಕೆ ವಿ ಜಿ,ತಾಜುದ್ದೀನ್ ಟರ್ಲಿ ಅರಂತೋಡು,ರಾಧಾಕೃಷ್ಣ ಅಮರ ಗುತ್ತಿಗಾರ್,ಉದಯ ಕೊಲ್ಲಮೋಗ್ರ, ಆರ್ ಬಿ ಬಶೀರ್ ಪೈಚಾರ್,ಅಜಿತ್ ಮಾಡವು ಇವರನ್ನು ಆಯ್ಕೆ ಮಾಡಲಾಯಿತು.
ಸಿದ್ದೀಕ್ ಗೂನಡ್ಕ ಸ್ವಾಗತಿಸಿ ರಫೀಕ್ ಲೈಫ್ ಕೇರ್ ವಂದಿಸಿದರು.