ಈಶ್ವರಮಂಗಲದ ಯುವಕನೊಬ್ಬ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಆ.20ರಿಂದ ನಾಮಪತ್ತೆಯಾಗಿರುವುದಾಗಿ ಮನೆಯವರು ಬೆಂಗಳೂರು ಬೆಳ್ಳಂದೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ.
ಈಶ್ವರಮಂಗಲದ ಶ್ರೀಕಾಂತ್ ಎಂಬವರು ಬೆಂಗಳೂರಿನಲ್ಲಿ ಚಿಕ್ಕ ಬೆಳ್ಳಂದೂರು ಕಾರ್ಮೆಲಾರಂ ರೈಲು ನಿಲ್ದಾಣ ಪಕ್ಕ ನಿಸರ್ಗ ಪಿ.ಜಿ ಯಲ್ಲಿದ್ದು, ಬೆಂಗಳೂರಿನಲ್ಲಿ ಟೆಕ್ನಿಕಲ್ ಆಗಿ ಕೆಲಸ ಮಾಡಿಕೊಂಡಿದ್ದು, ಆ.20ರಂದು ನಾಪತ್ತೆಯಾಗಿದ್ದಾರೆ. ಅವರ ಬ್ಯಾಗ್ ವಿನೋದ ಎಂಬವರಿಗೆ ದೊರೆತಿದ್ದು ಅದನ್ನು ಮನೆಯವರಿಗೆ ನೀಡಿರುವುದಾಗಿ ತಿಳಿದುಬಂದಿದೆ.
ಶ್ರೀಕಾಂತರಿಗೆ 23 ವರ್ಷ ವಯಸ್ಸಾಗಿದ್ದು 5.6 ಅಡಿ ಎತ್ತರ ಇದ್ದಾರೆ. ಕನ್ನಡ, ಇಂಗ್ಲೀಷ್, ತುಳು, ಮರಾಠಿ ಮಾತನಾಡುತ್ತಿದ್ದಾರೆ. ಇವರ ಸುಳಿವು ಸಿಕ್ಕಿದವರು ಹತ್ತಿರದ ಠಾಣೆಗೆ ತಿಳಿಸಬಹುದಾಗಿದೆ.
ಇವರು ಕಂಡಲ್ಲಿ ಸಂಪರ್ಕಿಸಿ
ಅಜಿತ್ : 9611519049
ಜಗದೀಶ್ : 7338172659
ಮನೋಜ್ ಕುಮಾರ್ : 7907732213