ಅಡ್ಡಬೈಲು ಶ್ರೀ ಕೃಷ್ಣ ಭಜನಾ ಮಂದಿರದ ವತಿಯಿಂದ ಮುಳುಗು ತಜ್ಞ ಪ್ರಗತಿ ಅಚ್ಚು ತಂಡಕ್ಕೆ ಸನ್ಮಾನ

0


ಸಾಹಸ ಮೆರೆದು ತಂಡಕ್ಕೆ ಅಷ್ಟಮಿ ಕಾರ್ಯಕ್ರಮದಲ್ಲಿ ಶ್ಲಾಘನೆ

ಅಡ್ಡಂಬೈಲು ಶ್ರೀ ಕೃಷ್ಣ ಭಜನಾ ಮಂಡಳಿ ವತಿಯಿಂದ ನಡೆದ ಶ್ರೀ ಕೃಷ್ಣ ಜನ್ಮಾ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಅರೋಗ್ಯ ಸಮಿತಿ ಸದಸ್ಯ ಹಾಗೂ ಮುಳುಗು ತಜ್ಞ ಅಚ್ಚು ಪ್ರಗತಿ ಹಾಗೂ ಅವರ ತಂಡದ ಸದಸ್ಯರಿಗೆ ಸನ್ಮಾನ ನೀಡಿ ಗೌರವಿಸಿದೆ.

ಕಳೆದ ಕೆಲ ದಿನಗಳ ಹಿಂದೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಅಕ್ಕಿನೇನಿಯ ನಿವಾಸಿ ಆಶೋಕ್ ರವರ ಮೃತ ದೇಹವನ್ನು ಸಾಹಸಮಯವಾಗಿ ನದಿಯಲ್ಲಿ ನಿರಂತರ ಹುಡುಕಾಟ ನಡೆಸಿ ಮೇಲೆ ತರುವಲ್ಲಿ ಯಶಸ್ವಿಯಾದ ಅಚ್ಚು ಪ್ರಗತಿ ಆಸೀಫ್ ಮತ್ತು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಭಿಲಾಷ್ ಸುಳ್ಯ ಹಾಗೂ ಚಿದಾನಂದ ಎಂ ಕೆ ಮಾಡನ ಕಜೆ ಇವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಿದೆ.

ನೀರಿನಲ್ಲಿ ಮುಳುಗಿರುವ ಘಟನೆ ನಡೆದ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ್ದ ಈ ತಂಡ ತಮ್ಮ ಕಾರ್ಯಾಚರಣೆಯನ್ನು ಸೇವೆಯ ರೂಪದಲ್ಲಿ ಮಾಡಿ ನೀರಿನ ಸೆಳೆತವನ್ನು ಲೆಕ್ಕಿಸದೇ ಅವಿರತವಾಗಿ ಪರಿಶ್ರಮಿಸಿ ಶವವನ್ನು ಹೊರತೆಗೆದು ಅಂತಿಮ ಕ್ರಿಯ ವಿಧಿವಿಧಾನಗಳು ನಡೆಯುವ ತನಕ ಮನೆಯವರ ಜೊತೆಗಿದ್ದು ಉತ್ತಮ ಸಮಾಜ ಸೇವಕರಾಗಿ ತಮ್ಮ ಸೇವಾ ಮನೋಭಾವವನ್ನು ಪ್ರದರ್ಶಿಸಿದ ಸಂಗತಿ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿತ್ತು.